ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೂಲದ ಎಂಜಿನಿಯರ್ ಅಶೋಕ್ ವೀರರಾಘವನ್‌ಗೆ ಟೆಕ್ಸಾಸ್‌ನ ಅತ್ಯುನ್ನತ ಪ್ರಶಸ್ತಿ

Published 26 ಫೆಬ್ರುವರಿ 2024, 3:22 IST
Last Updated 26 ಫೆಬ್ರುವರಿ 2024, 3:22 IST
ಅಕ್ಷರ ಗಾತ್ರ

ಟೆಕ್ಸಾಸ್: ಭಾರತ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್ ಮತ್ತು ಪ್ರೊಫೆಸರ್ ಅಶೋಕ್ ವೀರರಾಘವನ್ ಅವರಿಗೆ ಟೆಕ್ಸಾಸ್‌ನ ಅತ್ಯುನ್ನತ ಶೈಕ್ಷಣಿಕ ಗೌರವಗಳಲ್ಲಿ ಒಂದಾದ ಎಡಿತ್ ಅಂಡ್ ಪೀಟರ್ ಒ'ಡೊನೆಲ್ ಪ್ರಶಸ್ತಿ ಲಭಿಸಿದೆ.

ಟೆಕ್ಸಾಸ್ ಅಕಾಡೆಮಿ ಆಫ್ ಮೆಡಿಸಿನ್, ಎಂಜಿನಿಯರಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು ರಾಜ್ಯದ ಉದಯೋನ್ಮುಖ ಸಂಶೋಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತದೆ. ಈ ಬಾರಿ ರೈಸ್ ವಿಶ್ವವಿದ್ಯಾಲಯದ ಜಾರ್ಜ್ ಆರ್ ಬ್ರೌನ್ ಸ್ಕೂಲ್ ಆಫ್ ಎಂಜಿನಿಯರಿಂಗ್‌ನ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಪ್ರಾಧ್ಯಾಪಕ ವೀರರಾಘವನ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಕ್ರಾಂತಿಕಾರಿ ಇಮೇಜಿಂಗ್ ತಂತ್ರಜ್ಞಾನಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ವೈದ್ಯಕೀಯ, ಎಂಜಿನಿಯರಿಂಗ್, ಜೈವಿಕ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರಗಳಲ್ಲಿ ಅಸಾಧಾರಣ ಸಾಧನೆಯಲ್ಲಿ ತೊಡಗಿರುವ ರಾಜ್ಯದ ಸ್ಟಾರ್ ಸಂಶೋಧಕರಿಗೆ ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ನೀಡಲಾಗುತ್ತದೆ.

ಮೂಲತಃ ಚೆನ್ನೈನವರಾದ ವೀರರಾಘವನ್, ‘ಈ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಇದು ಹಲವಾರು ವಿದ್ಯಾರ್ಥಿಗಳು, ಪೋಸ್ಟ್‌ಡಾಕ್ಸ್ ಮತ್ತು ಸಂಶೋಧನಾ ವಿಜ್ಞಾನಿಗಳು ಕಂಪ್ಯೂಟೇಶನಲ್‌ನಲ್ಲಿ ಮಾಡಿದ ಅದ್ಭುತ ಮತ್ತು ನವೀನ ಸಂಶೋಧನೆಯ ಮನ್ನಣೆಯಾಗಿದೆ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT