ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಮಹಿಳಾ ರಾಯಭಾರಿಯಾಗಿ ಭಾರತ ಮೂಲದ ಗೀತಾ ರಾವ್‌ ನೇಮಕ

Published 11 ಜುಲೈ 2023, 12:19 IST
Last Updated 11 ಜುಲೈ 2023, 12:19 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜಾಗತಿಕವಾಗಿ ಮಹಿಳಾ ಸಂಬಂಧಿತ ವಿಷಯಗಳ ರಾಯಭಾರಿಯಾಗಿ ಭಾರತ ಮೂಲದ ಅಮೆರಿಕದ ನಿವಾಸಿ ಗೀತಾ ರಾವ್ ಗುಪ್ತಾ ಅವರನ್ನು ಅಮೆರಿಕ ನೇಮಿಸಿದೆ. ಗೀತಾ ಅವರಿಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಪ್ರಮಾಣವಚನ ಬೋಧಿಸಿದರು.

ಇವರ ನೇಮಕ ಪ್ರಸ್ತಾವವನ್ನು ಅಮೆರಿಕದ ಸೆನೆಟ್‌ ಇದೇ ವರ್ಷದ ಮೇ ತಿಂಗಳಲ್ಲಿ 51–47 ಮತಗಳಿಂದ ಅಂಗೀಕರಿಸಿತ್ತು.

‘ಮಹಿಳೆಯರು ಇಂದು ವಿಶ್ವದಾದ್ಯಂತ ಅಸಮಾನತೆ ಎದುರಿಸುತ್ತಿದ್ದಾರೆ. ಅವರ ಘನತೆಗೆ ಧಕ್ಕೆಯಾಗುವ ಬೆಳವಣಿಗೆಗಳು, ಆಕೆ ಪೂರ್ಣ ಪ್ರಮಾಣದಲ್ಲಿ ಆರ್ಥಿಕತೆಯಲ್ಲಿ ಭಾಗಿ ಆಗುವುದನ್ನು ತಡೆಯುತ್ತಿವೆ’ ಎಂದು ಗೀತಾ ರಾವ್ ಅಭಿಪ್ರಾಯಪಟ್ಟರು.

‘ಮಹಿಳೆಗೆ ಇಂದು ನಿತ್ಯವೂ ಸುರಕ್ಷತೆಯ ಭಯ ಹಾಗೂ ಹಿಂಸೆಯ ಭೀತಿ ಕಾಡುತ್ತಿದೆ. ಆಕೆ ಮುಕ್ತವಾಗಿ ಸಂಚರಿಸಲೂ ಆಗುತ್ತಿಲ್ಲ. ತುರ್ತು ಹಾಗೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಆಕೆಯೇ ಹೆಚ್ಚು ಸಮಸ್ಯೆಗೆ ಗುರಿಯಾಗುತ್ತಾಳೆ’ ಎಂದು ಪ್ರಮಾಣವಚನ ಸ್ವೀಕಾರದ ನಂತರ ಹೇಳಿದರು. 

‘ತಾವು ಮೊದಲ ವಲಸಿಗರ ಪೀಳಿಗೆಗೆ ಸೇರಿದವರು’ ಎಂದು ತಮ್ಮನ್ನು ಬಣ್ಣಿಸಿಕೊಂಡ ಅವರು, ನಾನು ವೃತ್ತಿಪರ ಕುಟುಂಬ ಹಿನ್ನೆಲೆಯಿಂದ ಬಂದಿದ್ದು, ಕುಟುಂಬದ ಸದಸ್ಯರು ಸಮುದಾಯದ ಸೇವೆಗೆ ಬದ್ಧರಾಗಿದ್ದಾರೆ. ಪುರುಷ ಸದಸ್ಯರು ಬೆಂಬಲ ನೀಡುತ್ತಿದ್ದಾರೆ’ ಎಂದರು.

‘ನಾನು ಭಾರತದಲ್ಲಿ ಪಿಎಚ್‌.ಡಿ ಮಾಡಿದ್ದು, ಮಹಿಳೆಯರು ತಮ್ಮ ವೃತ್ತಿ ಬದುಕಿನಲ್ಲಿ ಎದುರಿಸುವ ಸಮಸ್ಯೆಗಳ ಅರಿವಿದೆ. ಆ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಒತ್ತು ನೀಡುತ್ತೇನೆ’ ಎಂದು ಸೆನೆಟ್‌ ಸದಸ್ಯರಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT