ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ: ಭಾರತ ಮೂಲದ ನಿಕ್ಕಿ ಹ್ಯಾಲೆ ಘೋಷಣೆ

Last Updated 16 ಫೆಬ್ರುವರಿ 2023, 1:52 IST
ಅಕ್ಷರ ಗಾತ್ರ

ವಾಷಿಂಗ್ಟನ್: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಭಾರತ ಮೂಲದ ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲೆ ಬುಧವಾರ ಘೋಷಿಸಿದ್ದಾರೆ. ಒಂದು ಕಾಲದ ತಮ್ಮ ನಾಯಕ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಜೂನಿಯರ್ ಹಾಗೂ ಅವರಿಗೆ ಪರ್ಯಾಯ ಹೊಸ ಮುಖ ಎಂದು ತಮ್ಮನ್ನು ತಾವು ಬಿಂಬಿಸಿಕೊಂಡಿದ್ದಾರೆ.

51 ವರ್ಷದ ಹ್ಯಾಲಿ ಅವರು ಸೌತ್ ಕೆರೊಲಿನಾದಲ್ಲಿ ಎರಡು ಬಾರಿ ಗವರ್ನರ್ ಆಗಿದ್ದರು. ವಿಶ್ವಸಂಸ್ಥೆಗೆ ಅಮೆರಿಕದ ಮಾಜಿ ರಾಯಭಾರಿಯೂ ಹೌದು.

ದಕ್ಷಿಣ ಕೆರೊಲಿನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬಲವಾದ ಅಮೆರಿಕಕ್ಕಾಗಿ... ಹೆಮ್ಮೆಯ ಅಮೆರಿಕಕ್ಕಾಗಿ... ನಾನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ!’ಎಂದು ಹೇಳಿದರು.

‘ಅಮೆರಿಕ ವಿಚಲಿತವಾದಾಗ, ಜಗತ್ತು ಅಸುರಕ್ಷಿತವಾಗುತವಾಗುತ್ತದೆ. ಇಂದು ನಮ್ಮ ಶತ್ರುಗಳು ಅಮೆರಿಕದ ಯುಗವು ಮುಗಿದಿದೆ ಎಂದು ಭಾವಿಸುತ್ತಿದ್ದಾರೆ. ಅದು ಅವರ ತಪ್ಪು ತಿಳುವಳಿಕೆ. ಅಮೆರಿಕ ಯಾವತ್ತೂ ತನ್ನ ಸ್ಥಾನವನ್ನು ಕಳೆಕೊಳ್ಳುವುದಿಲ್ಲ’ಎಂದು ಹೇಳಿದರು.

20ನೇ ಶತಮಾನದ ರಾಜಕಾರಣಿಗಳ ಮೇಲೆ ನಾವು ನಂಬಿ ಇಟ್ಟರೆ, 21ನೇ ಶತಮಾನದ ಹೋರಾಟವನ್ನು ಗೆಲ್ಲಲು ಸಾಧ್ಯವಿಲ್ಲ. ವುದಿಲ್ಲ. ಆದ್ದರಿಂದ, ನಾನು ಒಂದು ಪ್ರಕಟಣೆಯನ್ನು ಮಾಡಲು ಇಚ್ಛಿಸುತ್ತೇನೆ. ವಲಸಿಗರ ಮಗಳಾಗಿ, ಯುದ್ಧದ ಅನುಭವಿಯ ಹೆಮ್ಮೆಯ ಹೆಂಡತಿಯಾಗಿ ಮತ್ತು ಇಬ್ಬರು ಅದ್ಭುತ ಮಕ್ಕಳ ತಾಯಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ’ಎಂದು ಅವರು ಹೇಳಿದರು.

ಈ ಮೂಲಕ ಮೂರನೇ ಬಾರಿಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ನಾನು ಮೊದಲ ಪ್ರತಿ ಸ್ಪರ್ಧಿ ಎಂದು ನಿಕ್ಕಿ ಹೇಳುವ ಪ್ರಯತ್ನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT