ನ್ಯೂಜೆರ್ಸಿ: ನಾಲ್ಕು ವರ್ಷದ ಹೆಣ್ಣು ಮಗು ಮನೆಯ ಬಾಲ್ಕನಿಯಲ್ಲಿ ನಿಂತು ಏಕಾಂಗಿಯಾಗಿ ಅಳುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಭಾರತೀಯ ದಂಪತಿ ಶವವಾಗಿ ಪತ್ತೆಯಾಗಿರುವ ಪ್ರಕರಣ ಅಮೆರಿಕ ನ್ಯೂಜೆರ್ಸಿಯಲ್ಲಿ ಬೆಳಕಿಗೆ ಬಂದಿದೆ.

ಉತ್ತರದ ಆರ್ಲಿಂಗ್ಟನ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ದಂಪತಿ ಚಾಕು ಇರಿತದಿಂದ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪತ್ನಿ ಜೊತೆ ಜಗಳ ಮಾಡಿಕೊಂಡಿದ್ದ ಪತಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದು, ಬಳಿಕ ತಾನು ಇರಿದುಕೊಂಡಿದ್ದಾನೆ ಎಂದು ಮತ್ತೊಂದು ಮಾಧ್ಯಮ ವರದಿ ಮಾಡಿದೆ ಎಂದು ಪಿಟಿಐ ತಿಳಿಸಿದೆ.

ನ್ಯೂಜೆರ್ಸಿಯ ನಾರ್ತ್ ಆರ್ಲಿಂಗ್ಟನ್ ಪ್ರಾಂತ್ಯದ ರಿವರ್ ವ್ಯೂ ಗಾರ್ಡನ್ಸ್ ಸಂಕೀರ್ಣದಲ್ಲಿರುವ 21 ಗಾರ್ಡನ್ ಟೆರೇಸ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಬಾಲಾಜಿ ಭರತ್ ರುದ್ರಾವರ್ (32) ಮತ್ತು ಅವರ ಪತ್ನಿ ಆರತಿ ಬಾಲಾಜಿ ರುದ್ರಾವರ್ (30) ಮೃತರು. ಈ ವಸತಿ ಸಮುಚ್ಛಯದಲ್ಲಿ 15,000ಕ್ಕೂ ಹೆಚ್ಚು ನಿವಾಸಗಳಿವೆ.

‘ನನ್ನ ಮೊಮ್ಮಗಳು ಬಾಲ್ಕನಿಯಲ್ಲಿ ಅಳುತ್ತಿರುವುದನ್ನು ಕಂಡ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಬುಧವಾರ ಪೊಲೀಸರು ಮನೆಗೆ ಪ್ರವೇಶಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಬಾಲಾಜಿ ತಂದೆ ಭರತ್ ರುದ್ರಾವರ್ ಪಿಟಿಐಗೆ ತಿಳಿಸಿದ್ದಾರೆ.

‘ಸಾವಿನ ಕಾರಣ ಮತ್ತು ಸಂದರ್ಭಗಳನ್ನು ನಿರ್ಧರಿಸಲು ತನಿಖಾಧಿಕಾರಿಗಳು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ, ಆದರೆ, ಇಬ್ಬರಿಗೂ ಚಾಕುವಿನಿಂದ ಇರಿದಿರುವುದು ದೃಢಪಟ್ಟಿದೆ.’ ಎಂದು ವರದಿ ತಿಳಿಸಿದೆ.

‘ಸ್ಥಳೀಯ ಪೊಲೀಸರು ಗುರುವಾರ ದುರಂತದ ಬಗ್ಗೆ ನನಗೆ ಮಾಹಿತಿ ನೀಡಿದರು. ಸಾವಿನ ಕಾರಣದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮರಣೋತ್ತರ ಪರೀಕ್ಷೆ ವರದಿಯನ್ನು ಹಂಚಿಕೊಳ್ಳುವುದಾಗಿ ಅಮೆರಿಕದ ಪೊಲೀಸರು ಹೇಳಿದ್ದಾರೆ'ಎಂದು ರುದ್ರಾವರ್ ಹೇಳಿದ್ದಾರೆ.

‘ನನ್ನ ಸೊಸೆ ಏಳು ತಿಂಗಳ ಗರ್ಭಿಣಿಯಾಗಿದ್ದಳು. ನಾವು ಅವರ ಮನೆಗೆ ಹೋಗಿದ್ದೆವು. ಮತ್ತೆ ಅಲ್ಲಿಗೆ ಹೋಗಲು ಯೋಜಿಸುತ್ತಿದ್ದೆವು. ಅಷ್ಟರೊಳಗೆ ಹೀಗಾಗಿದೆ.’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.