ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಗುಂಡಿನ ದಾಳಿ–ಭಾರತೀಯ ವಿದ್ಯಾರ್ಥಿ ಸಾವು

Published 24 ನವೆಂಬರ್ 2023, 11:18 IST
Last Updated 24 ನವೆಂಬರ್ 2023, 11:18 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದ ಭಾರತ ಮೂಲದ ವಿದ್ಯಾರ್ಥಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.

26 ವರ್ಷದ ಆದಿತ್ಯ ಅದ್ಲಖಾ ಹತ್ಯೆಯಾದ ವಿದ್ಯಾರ್ಥಿ. ಆದಿತ್ಯ, ಸಿನ್‌ಸಿನಾಟಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮಾಲೆಕ್ಯೂಲರ್ ಅಂಡ್ ಡೆವಲೆಪ್‌ಮೆಂಟಲ್‌ ಬಯೊಲಾಜಿ ವಿಷಯದಲ್ಲಿ ಪಿಎಚ್‌.ಡಿ ಮಾಡುತ್ತಿದ್ದ ಎಂದು ಡಬ್ಲ್ಯುಎಕ್ಸ್‌ಐಎಕ್ಸ್‌ ಟಿವಿ ವರದಿ ಮಾಡಿದೆ.

‘ನ.9ರಂದು ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಆದಿತ್ಯ ಅವರತ್ತ ಗುಂಡು ಹಾರಿಸಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಆದಿತ್ಯ ಅವರನ್ನು ಯುಸಿ ಮೆಡಿಕಲ್‌ ಸೆಂಟರ್‌ನಲ್ಲಿ ದಾಖಲಿಸಲಾಗಿತ್ತು.  ಎರಡು ದಿನಗಳ ನಂತರ ಅವರು ಮೃತಪಟ್ಟರು’ ಎಂದು ಹ್ಯಾಮಿಲ್ಟನ್‌ ಕೌಂಟಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಘಟನೆಗೆ ಸಂಬಂಧಿಸಿ ಈ ವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಸ್ಥಳೀಐ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT