ಸಿಂಗಪುರ: ‘ಭಾರತೀಯ ಹೈಕಮಿಷನ್ ಹಾಗೂ ಸಿಂಗಪುರ ರಾಷ್ಟ್ರೀಯ ವಿಶ್ವವಿದ್ಯಾಲಯದ ಭಾಷಾ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಈ ವಾರಾಂತ್ಯದಲ್ಲಿ ‘ಪ್ರಾದೇಶಿಕ ಹಿಂದಿ ಸಮ್ಮೇಳನ’ವನ್ನು ಸಿಂಗಪುರದಲ್ಲಿ ಆಯೋಜಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
‘ಆಗ್ನೇಯ ಏಷ್ಯಾದಲ್ಲಿ ಹಿಂದಿ: ಅಭಿವೃದ್ಧಿಯ ಹೊಸ ಆಲೋಚನೆಗಳು’ ವಿಷಯವನ್ನು ಕೇಂದ್ರೀಕರಿಸಿದ ಸಮ್ಮೇಳನ ಇದಾಗಿದ್ದು, ಅಧ್ಯಾಪಕರು, ಸಂಶೋಧಕರು ಹಾಗೂ ಭಾಷಾತಜ್ಞರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಸಿಂಗಪುರ ವಿಶ್ವವಿದ್ಯಾಲಯದ ಭಾಷಾ ಅಧ್ಯಯನ ಕೇಂದ್ರದ ಸಂಚಾಲಕಿ ಡಾ. ಸಂಧ್ಯಾ ಸಿಂಗ್ ವಿವರಿಸಿದರು.
‘ಸೆ.13ರಿಂದ 15ರವರೆಗೆ ಕಾರ್ಯಾಗಾರ ನಡೆಯಲಿದೆ. ವಿದೇಶದಲ್ಲಿ ಎರಡನೇ ಭಾಷೆಯಾಗಿ ಹಿಂದಿ ಬೆಳವಣಿಗೆಯ ವಸ್ತುಸ್ಥಿತಿ ಹಾಗೂ ಭವಿಷ್ಯದ ಕುರಿತು ಚರ್ಚೆಗಳು ನಡೆಯಲಿವೆ. ಹಿಂದಿ ಸಾಹಿತ್ಯದ ಬಗೆಗೂ ಮಂಥನ ನಡೆಸಲಾಗುವುದು’ ಎಂದರು.