ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಇಂಡಿಯಾನದಲ್ಲಿ ಗರ್ಭಪಾತ ನಿಷೇಧ

Last Updated 6 ಆಗಸ್ಟ್ 2022, 11:42 IST
ಅಕ್ಷರ ಗಾತ್ರ

ಇಂಡಿಯಾನಪೊಲಿಸ್‌ (ಅಮೆರಿಕ): ಇಂಡಿಯಾನ ರಾಜ್ಯವು ಗರ್ಭಪಾತವನ್ನು ನಿಷೇಧಿಸಿದೆ. ಗರ್ಭಪಾತ ನಿಷೇಧ ಮಸೂದೆಯನ್ನು ಅಲ್ಲಿನ ಜನಪ್ರತಿನಿಧಿಗಳು ಬಹುಮತದಿಂದ ಅಂಗೀಕರಿಸಿದ ಬಳಿಕ ನಿಷೇಧದ ಆದೇಶಕ್ಕೆ ಗವರ್ನರ್‌ ಶುಕ್ರವಾರ ಸಹಿ ಮಾಡಿದ್ದಾರೆ.

ಗರ್ಭಪಾತವನ್ನು ಸಾಂವಿಧಾನಿಕ ಹಕ್ಕು ಎಂದು ಈ ಹಿಂದೆ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದ ಬಳಿಕ, ಈ ಆದೇಶವನ್ನು ಜಾರಿ ಮಾಡಿದ ಅಮೆರಿಕದ ಮೊದಲ ರಾಜ್ಯ ಇದಾಗಿದೆ. ಸುಪ್ರೀಂ ಕೋರ್ಟ್‌ ಆದೇಶ ಬಂದ ಬಳಿಕ ಇಂಡಿಯಾನವು ಗರ್ಭಪಾತದ ಕುರಿತು ಅತ್ಯಂತ ಕಠಿಣ ಕಾನೂನು ರೂಪಿಸುವ ಇರಾದೆ ವ್ಯಕ್ತಪಡಿಸಿತ್ತು. ನಿಷೇಧವು ಸೆಪ್ಟೆಂಬರ್‌ 15ರಿಂದ ಜಾರಿಯಾಗಲಿದೆ.

ಆಸ್ಪತ್ರೆಗಳಲ್ಲಿ ಮಾತ್ರವೇ ಗರ್ಭಪಾತ ಮಾಡಿಸಿಕೊಳ್ಳಬೇಕು. ಗರ್ಭಪಾತ ಕ್ಲಿನಿಕ್‌ಗಳ ಪರವಾನಗಿಯನ್ನು ರದ್ದು ಮಾಡಲಾಗುವುದು. ಜತೆಗೆಅಕ್ರಮವಾಗಿ ಗರ್ಭಪಾತ ಮಾಡುವ ವೈದ್ಯರ ಪರವಾನಗಿಯನ್ನೂ ರದ್ದು ಮಾಡಲಾಗುವುದು ಎಂದು ಮಸೂದೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT