ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐ2ಯು2’ ಶೃಂಗ: ಭಾರತದ ಸಹಭಾಗಿತ್ವದಿಂದ ಮಹತ್ವದ ಬದಲಾವಣೆ’

Last Updated 13 ಜುಲೈ 2022, 11:44 IST
ಅಕ್ಷರ ಗಾತ್ರ

ಜೆರುಸಲೇಮ್: ‘ಐ2ಯು2 ಸಂಘಟನೆ ರಚನೆ ಪ್ರಮುಖ ಹೆಜ್ಜೆಯಾಗಿದೆ. ಅದರಲ್ಲೂ, ಸಂಘಟನೆಗೆ ಭಾರತದ ಸಹಭಾಗಿತ್ವ ಇರುವುದು ಜಾಗತಿಕ ಮಟ್ಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ’ ಎಂದು ಇಸ್ರೇಲ್‌ನ ಮಾಜಿ ರಾಷ್ಡ್ರೀಯ ಭದ್ರತಾ ಸಲಹೆಗಾರ ಮೇಜರ್‌ ಜನರಲ್ ಯಾಕೊವ್ ಅಮಿಡ್ರೋರ್‌ ಪ್ರತಿಪಾದಿಸಿದ್ದಾರೆ.

‘ಐ2ಯು2’ ಶೃಂಗಸಭೆಗೂ ಮುನ್ನ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು, ‘ಜಾಗತಿಕ ಹಿತಾಸಕ್ತಿ ರಕ್ಷಣೆ ದೃಷ್ಟಿಯಿಂದ ಮತ್ತಷ್ಟು ದೇಶಗಳು ಈ ಸಂಘಟನೆ ಸೇರುವಂತೆ ಈ ನಡೆ ಪ್ರೇರಣೆ ನೀಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತ, ಇಸ್ರೇಲ್, ಯುಎಇ ಹಾಗೂ ಅಮೆರಿಕ ‘ಐ2ಯು2’ನಲ್ಲಿ ಸದಸ್ಯ ರಾಷ್ಟ್ರಗಳಾಗಿದ್ದು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ.

ಜುಲೈ 13ರಿಂದ 16ರ ವರೆಗೆ ಸಂಘಟನೆಯ ಶೃಂಗಸಭೆ ವರ್ಚುವಲ್‌ ವಿಧಾನದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT