ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ 'ಟೆಲಿಗ್ರಾಮ್‌'ಗೆ ನಿಷೇಧ ಹೇರಿದ ಇರಾಕ್‌

Published 9 ಆಗಸ್ಟ್ 2023, 11:33 IST
Last Updated 9 ಆಗಸ್ಟ್ 2023, 11:33 IST
ಅಕ್ಷರ ಗಾತ್ರ

ಬಾಗ್ದಾದ್‌: ರಾಷ್ಟ್ರೀಯ ಭದ್ರತೆಯ ಕಾರಣದಿಂದ ಖ್ಯಾತ ಸಾಮಾಜಿಕ ಜಾಲತಾಣ ಟೆಲಿಗ್ರಾಮ್ ಅನ್ನು ನಿಷೇಧಿಸಿರುವುದಾಗಿ ಇರಾಕ್ ಸರ್ಕಾರ ಹೇಳಿದೆ.

ರಾಷ್ಟ್ರೀಯ ಭದ್ರತೆಯ ದೃಷ್ಠಿಯಿಂದ ಉನ್ನತ ಅಧಿಕಾರಿಗಳ ನಿರ್ದೇಶನ ಪ್ರಕಾರ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಟೆಲಿಗ್ರಾಮ್‌ ಉಲ್ಲಂಘಿಸುತ್ತಿರುವ ನಾಗರಿಕರ ವೈಯಕ್ತಿಕ ದತ್ತಾಂಶಗಳನ್ನು ರಕ್ಷಿಸುವ ಸಲುವಾಗಿ ನಿಷೇಧಿಸಲಾಗಿದೆ ಎಂದು ಹೇಳಿದೆ.

ಸರ್ಕಾರಿ ಸಂಸ್ಥೆ ಹಾಗೂ ಬಳಕೆದಾರರ ಮಾಹಿತಿ ಸೋರಿಕೆ ಬಯಸಿ ಟೆಲಿಗ್ರಾಮ್‌ ಅನ್ನು ಹಲವು ಬಾರಿ ಸಂಪರ್ಕಿಸಲಾಯಿತಾದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದು ಸಮಾಜದ ಶಾಂತಿ ಹಾಗೂ ರಾಷ್ಟ್ರೀಯ ಭದ್ರತೆ ದೃಷ್ಠಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇರಾಕ್ ಹೇಳಿದೆ.

ಇರಾಕ್‌ನಲ್ಲಿ ಟೆಲಿಗ್ರಾಮ್ ಭಾರಿ ಪ್ರಸಿದ್ಧಿ ಪಡೆದಿದ್ದು, ಇದರ ಗುಂಪುಗಳನ್ನು ರಚಿಸುವ ಮೂಲಕ ಇರಾನ್‌ ಪರವಾದ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಬಾಗ್ದಾದ್‌ನಲ್ಲಿರುವ ಬಳಕೆದಾರರಿಗೆ ಆ್ಯಪ್‌ ಬಳಕೆ ಸಾಧ್ಯವಾಗುತ್ತಿಲ್ಲವಾದರೂ, ವಿಪಿಎನ್‌ ಮೂಲಕ ಬಳಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT