ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ ಮಸೀದಿ ಗೋಡೆಯಲ್ಲಿ ಇಸ್ಲಾಂ ವಿರೋಧಿ ಬರಹ

Last Updated 12 ಏಪ್ರಿಲ್ 2021, 3:51 IST
ಅಕ್ಷರ ಗಾತ್ರ

ರೆನ್ನೆಸ್, ಫ್ರಾನ್ಸ್: ಪಶ್ಚಿಮ ಫ್ರಾನ್ಸ್‌ನ ಮಸೀದಿಯ ಗೋಡೆಯೊಂದರಲ್ಲಿ ದುಷ್ಕರ್ಮಿಗಳು ಇಸ್ಲಾಂ ವಿರೋಧಿ ಬರಹ ಮತ್ತು ಚಿತ್ರಗಳನ್ನು ರಚಿಸಿದ್ದರು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ರಂಜಾನ್ ಮಾಸದ ಆರಂಭಕ್ಕೆ ಎರಡು ದಿನಗಳು ಬಾಕಿ ಇರುವಂತೆಯೇ ಈ ಕೃತ್ಯ ನಡೆದಿದೆ. ಈ ಘಟನೆಯನ್ನು ಆಂತರಿಕ ಸಚಿವ ಜೆರಾಲ್ಡ್ ಡಮೇನಿನ್ ಖಂಡಿಸಿದ್ದಾರೆ.

ಭಾನುವಾರ ಬೆಳಗಿನ ಜಾವ ಮಸೀದಿ ಮತ್ತು ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ಗೆ ಬಂದಿದ್ದ ಸ್ಥಳೀಯ ಮುಸ್ಲಿಮರು ಗೋಡೆಯಲ್ಲಿ ಇಸ್ಲಾಂ ವಿರೋಧಿ ಬರಹ ಮತ್ತು ಚಿತ್ತಾರ, ಟ್ಯಾಗ್ ಇರುವುದನ್ನು ಗಮನಿಸಿದ್ದಾರೆ.

ಈ ಬಗ್ಗೆ ತನಿಖೆಯನ್ನು ಸ್ಥಳೀಯ ಆಡಳಿತ ಕೈಗೆತ್ತಿಕೊಂಡಿದೆ.

ಸ್ಥಳೀಯ ಮುಸ್ಲಿಂ ಸಮುದಾಯದ ಮುಖಂಡರು ಈ ಕೃತ್ಯವನ್ನು ಖಂಡಿಸಿದ್ದು, ಬಳಿಕ ಸ್ಥಳೀಯ ಆಡಳಿತ ಮಸೀದಿ ಗೋಡೆಯಲ್ಲಿದ್ದ ಬರಹ ಮತ್ತು ಚಿತ್ತಾರವನ್ನು ಅಳಿಸಿ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT