ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ: 11 ಸಾವಿರ ದಾಟಿದ ಮೃತರ ಸಂಖ್ಯೆ

Published 15 ಸೆಪ್ಟೆಂಬರ್ 2023, 15:48 IST
Last Updated 15 ಸೆಪ್ಟೆಂಬರ್ 2023, 15:48 IST
ಅಕ್ಷರ ಗಾತ್ರ

ಡೆರ್ನಾ,ಲಿಬಿಯಾ (ಎ.ಪಿ): ‘ಡೇನಿಯಲ್’ ಚಂಡಮಾರುತ ಹಾಗೂ ಆ ನಂತರ ಸುರಿದಿದ್ದ ಧಾರಾಕಾರ ಮಳೆ, ಪ್ರವಾಹದ ಪರಿಣಾಮ ಲಿಬಿಯಾದಲ್ಲಿ ಮೃತಪಟ್ಟವರ ಸಂಖ್ಯೆ 11 ಸಾವಿರದ ಗಡಿ ದಾಟಿದೆ. ಇನ್ನೂ 10 ಸಾವಿರ ಜನರು ನಾಪತ್ತೆಯಾಗಿದ್ದಾರೆ.

ಡೆರ್ನಾ ನಗರ ಸೇರಿದಂತೆ ತೀವ್ರ ಬಾಧಿತವಾಗಿರುವ ಪ್ರದೇಶಗಳಲ್ಲಿ ಲಿಬಿಯಾ ಆಡಳಿತವು ಶೋಧ ಕಾರ್ಯವನ್ನು ಚುರುಕುಗೊಳಿಸಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದು, ಸಾವಿನ ಸಂಖ್ಯೆ ಏರಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರವಾಹದಿಂದಾಗಿ ಎರಡು ಜಲಾಶಯಗಳು ಹಾನಿಗೊಂಡಿದೆ. ಹೆಚ್ಚುವರಿ ನೀರು ಏಕಾಏಕಿ ಡೆರ್ನಾ ನಗರದತ್ತ ಹರಿದಿದ್ದರಿಂದಾಗಿ ಹಾನಿ ಪ್ರಮಾಣ ಏರಿದೆ. ಹಲವರ ಶವಗಳು ಮಣ್ಣಿನೊಳಗೆ ಸಿಲುಕಿರುವ ಅಥವಾ ಸಮುದ್ರದ ಪಾಲಾಗಿರುವ ಶಂಕೆ ಇದೆ. ಶವಗಳ ಪತ್ತೆಗೆ ನುರಿತ ಈಜುಗಾರ ನೆರವನ್ನೂ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT