ನ್ಯೂಯಾರ್ಕ್/ನವದೆಹಲಿ: ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರ ತಾಯಿ ಹಾಗೂ ಭಾರತೀಯ ಸಿನಿಮಾ ನಿರ್ಮಾಪಕಿ ಮೀರಾ ನಾಯರ್ ಅವರ ಹೆಸರು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ‘ಜೆಫ್ರಿ ಎಫ್ಸ್ಟೈನ್ ಫೈಲ್’ ನಲ್ಲಿ ಉಲ್ಲೇಖವಾಗಿದೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ ಉದ್ಯಮಿ ಜೆಫ್ರಿ ಎಫ್ಸ್ಟೈನ್ ದುಷ್ಕೃತ್ಯಗಳ ತನಿಖೆಗೆ ಸಂಬಂಧಿಸಿದ ಇನ್ನಷ್ಟು ದಾಖಲೆಗಳನ್ನು ಇಲಾಖೆ ಬಿಡುಗಡೆ ಮಾಡಿದೆ.

ಮಾನವಕಳ್ಳಸಾಗಣೆ ಅಪರಾಧಿ ಘಿಸಲೇನ್ ಮ್ಯಾಕ್ಸ್ವೆಲ್ ಆಯೋಜಿಸಿದ್ದ ‘ಔತಣಕೂಟ’ದಲ್ಲಿ ಮೀರಾ ನಾಯರ್ ಪಾಲ್ಗೊಂಡಿದ್ದರು ಎಂದು ದಾಖಲೆಗಳಲ್ಲಿ ಇದೆ.

ಭಾರತ ನಿರಾಕರಣೆ:

ಎಫ್ಸ್ಟೈನ್ ಫೈಲ್ನಲ್ಲಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪ, ಇಸ್ರೇಲ್ಗೆ ಅವರು ನೀಡಿದ್ದ ಭೇಟಿಯ ಉಲ್ಲೇಖ ಆಗಿರುವುದನ್ನು ಭಾರತದ ವಿದೇಶಾಂಗ ಇಲಾಖೆ ಸ್ಪಷ್ಟವಾಗಿ ನಿರಾಕರಿಸಿದೆ.

‘ಈ ಉಲ್ಲೇಖಗಳು ಅಪರಾಧಿಯೊಬ್ಬನ ಕೀಳು ಆಲೋಚನೆಗಳಷ್ಟೇ’ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.