ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಜತೆ ಕೆಲಸ ಮುಂದುವರಿಸುತ್ತೇವೆ: ಎಕ್ಸ್‌ ಪ್ರಕಟಣೆ ಬಿಡುಗಡೆ

Published 18 ಏಪ್ರಿಲ್ 2024, 12:59 IST
Last Updated 18 ಏಪ್ರಿಲ್ 2024, 12:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ‘ಪಾಕಿಸ್ತಾನದ ಸರ್ಕಾರದ ಕಳವಳಗಳನ್ನು ಅರ್ಥಮಾಡಿಕೊಂಡು ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ’ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್‌’ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಭದ್ರತಾ ಸಮಸ್ಯೆಗಳ ಕಾರಣದಿಂದ ಮೈಕ್ರೋಬ್ಲಾಗಿಂಗ್‌ ವೆಬ್‌ಸೈಟ್‌ ‘ಎಕ್ಸ್‌’ ಅನ್ನು ದೇಶದಲ್ಲಿ ನಿಷೇಧಿಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದ ಮರುದಿನ ‘ಎಕ್ಸ್‌’ ಈ ರೀತಿ ಪ್ರತಿಕ್ರಿಯಿಸಿದೆ.

ಪಾಕ್‌ನಲ್ಲಿ ಫೆಬ್ರುವರಿ 8ರಂದು ನಡೆದ ಸಾರ್ವತ್ರಿಕ ಚುನಾವಣಾ ಅಕ್ರಮದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಮುಖ್ಯ ನ್ಯಾಯಮೂರ್ತಿ ಶಾಮೀಲಾಗಿದ್ದಾರೆ ಎಂದು ರಾವಲ್ಪಿಂಡಿಯ ಮಾಜಿ ಕಮಿಷನರ್‌ ಲಿಯಾಕತ್‌ ಚಟ್ಟಾ ಅವರು ಆರೋಪಿಸಿದ ಬಳಿಕ ಫೆಬ್ರುವರಿ 17ರಂದು ‘ಎಕ್ಸ್‌’ ಬಳಕೆಯನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಯಿತು.

‘ಎಕ್ಸ್‌’ಗೆ ಲಾಗಿನ್‌ ಆಗಲು ಸಾಧ್ಯವಾಗುತ್ತಿಲ್ಲ ಎಂದು ಪತ್ರಕರ್ತ ಎಹ್ತಿಶಮ್‌ ಅಬ್ಬಾಸಿ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಬುಧವಾರ ವಿಚಾರಣೆ ನಡೆಸಿತ್ತು. 

‘ಪಾಕ್‌ ಸರ್ಕಾರದ ಕಾನೂನಾತ್ಮಕ ನಿರ್ದೇಶನಗಳನ್ನು ಅನುಸರಿಸಲು ‘ಎಕ್ಸ್‌’ ವಿಫಲವಾಗಿದೆ ಮತ್ತು ಈ ವೇದಿಕೆಯ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಅದನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಪಾಕ್‌ನ ಆಂತರಿಕ ಸಚಿವಾಲಯದ ಕಾರ್ಯದರ್ಶಿ ಖುರ್ರಂ ಆಘಾ ಅವರು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು.

ಗುಪ್ತಚರ ಏಜೆನ್ಸಿಗಳ ವರದಿಗಳ ಆಧಾರದ ಮೇಲೆ ಆಂತರಿಕ ಸಚಿವಾಲಯವು ಫೆಬ್ರುವರಿ 17ರಂದು, ತಕ್ಷಣದಿಂದಲೇ ಜಾರಿಗೆ ಬರುವಂತೆ ‘ಎಕ್ಸ್‌’ ಅನ್ನು ನಿರ್ಬಂಧಿಸುವಂತೆ ತಿಳಿಸಿತ್ತು ಎಂದು ವರದಿ ಹೇಳಿದೆ.

‘ಎಕ್ಸ್‌’ ನಿಷೇಧಕ್ಕೆ ಸಂಬಂಧಿಸಿದಂತೆ ಮೇ 9ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಂಧ್‌ ಹೈಕೋರ್ಟ್‌ ಆಂತರಿಕ ಸಚಿವಾಲಯಕ್ಕೆ ಸೂಚಿಸಿದೆ. ಪತ್ರಕರ್ತರ ಗುಂಪುಗಳು ಮತ್ತು ವಿವಿಧ ಹಕ್ಕುಗಳ ಸಂಸ್ಥೆಗಳು ‘ಎಕ್ಸ್‌’ ಮೇಲಿನ ನಿಷೇಧವನ್ನು ಖಂಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT