ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಬಾಂಬ್ ಸ್ಪೋಟ ಪ್ರಕರಣ- ಶ್ರೀಲಂಕಾಗೆ ತೆರಳಿದ ಶಾಸಕ ಎಸ್. ಆರ್. ವಿಶ್ವನಾಥ್

Last Updated 22 ಏಪ್ರಿಲ್ 2019, 10:38 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರನ್ನು ಕರೆತರಲು ನಗರದಿಂದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆಸಂಬಂಧಿಕರು ಶ್ರೀಲಂಕಾ ರಾಷ್ಟ್ರಕ್ಕೆ ತೆರಳಿದ್ದಾರೆ.

ಸದ್ಯದ ಮಾಹಿತಿಯಂತೆ ಏಳು ಮಂದಿ ಕಾಣೆಯಾಗಿದ್ದು ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಳಿದ ಐದು ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ.ನೆಲಮಂಗಲ ವ್ಯಾಪ್ತಿಯ ಪುಟ್ಟರಾಜು, ಲಕ್ಷ್ಮಿನಾರಾಯಣ, ಶಿವಣ್ಣ, ಹನುಮಂತರಾಯಪ್ಪ, ಅಡಕಮಾರನಹಳ್ಳಿಯ ಮಾರೇಗೌಡ, ವಿದ್ಯಾರಣ್ಯಪುರದ ರಂಗಪ್ಪ, ರಮೇಶ್ ಗೌಡ ಪ್ರವಾಸಕ್ಕೆ ತೆರಳಿದ್ದಪ್ರಮುಖರು.ಇವರಲ್ಲಿ ಲಕ್ಷ್ಮಿನಾರಾಯಣ ಹಾಗೂ ಶಿವಣ್ಣ ಎಂಬುವವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಇವರ ಶವಗಳನ್ನು ತರಲು ಶ್ರೀಲಂಕಾ ಸರ್ಕಾರದ ಜೊತೆ ಸಂಪರ್ಕದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇವರೆಲ್ಲಾ ಬಾಂಬ್ ಸ್ಫೋಟಗೊಂಡ ಶ್ರೀಲಂಕಾದ ಹೋಟೆಲ್‌ನ ರೂಂ ನಂ 619, 618ರಲ್ಲಿ ತಂಗಿದ್ದು, ಹೋಟೆಲ್‌ನಲ್ಲಿ ಇದ್ದ ಸಮಯದಲ್ಲಿಯೇ ಬಾಂಬ್ ಸ್ಫೋಟಗೊಂಡಿದೆ. ವಿದೇಶೀಯರು ಹೆಚ್ಚು ಮಂದಿ ತಂಗಿದ್ದ ಹೋಟೆಲ್‌ಗಳನ್ನೇ ಗುರಿಯಾಗಿಸಿಕೊಂಡು ಸ್ಫೋಟ ನಡೆಸಿದ್ದಾರೆ ಎನ್ನಲಾಗಿದೆ. ಹೋಟೆಲ್‌ನಲ್ಲಿ ಉಪಹಾರ ಸೇವಿಸುತ್ತಿದ್ದ ಸಮಯದಲ್ಲಿ ಬಾಂಬ್ ಸ್ಫೋಟಿಸಿದ್ದರಿಂದ ಹೆಚ್ಚು ಮಂದಿಯ ಪ್ರಾಣಕ್ಕೆ ಹಾನಿಯಾಗಿದೆ ಎನ್ನಲಾಗಿದೆ. ಆ ಸಮಯದಲ್ಲಿ ಕೆಳಗೆ ಇದ್ದ ಅಷ್ಟೂ ಮಂದಿ ಸಾವನ್ನಪ್ಪಿದ್ದರೆ, ದೂರದ ಕೊಠಡಿಗಳಲ್ಲಿ ಉಳಿದುಕೊಂಡಿದ್ದವರು ಗಾಯಗೊಂಡಿದ್ದಾರೆ.

ಈ ವಿಷಯ ಮಾಧ್ಯಮಗಳಿಂದ ತಿಳಿಯುದ್ದಂತೆಕರ್ನಾಟಕದಲ್ಲಿದ್ದ ಸಂಬಂಧಿಕರು ದಿಗ್ಭ್ರಾಂತರಾಗಿದ್ದು, ಕೂಡಲೆ ಪ್ರವಾಸಕ್ಕೆ ತೆರಳುತ್ತಿದ್ದವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ, ಯಾರೊಬ್ಬರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಇವರನ್ನು ಹುಡುಕಲು ಸಂಬಂಧಿಕರು ಸೋಮವಾರ ಬೆಳಗ್ಗೆ ಶ್ರೀಲಂಕಾಕ್ಕೆ ತೆರಳಿದ್ದಾರೆ. ಇವರಲ್ಲಿ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಕೂಡ ತೆರಳಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT