ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಂಟ್ ಎವರೆಸ್ಟ್ ಏರುವ ಶುಲ್ಕ ಹೆಚ್ಚಿಸಲು ಚಿಂತನೆ

Published 14 ಆಗಸ್ಟ್ 2023, 23:30 IST
Last Updated 14 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಕಠ್ಮಂಡು: 2025 ರಿಂದ ಜಾರಿಗೆ ಬರುವಂತೆ ಮೌಂಟ್ ಎವರೆಸ್ಟ್ ಏರಲು ಅನುಮತಿ ಪಡೆಯಲು ರಾಯಧನ ಶುಲ್ಕವನ್ನು 4,000 ಡಾಲರ್ ನಿಂದ 15,000 ಡಾಲರ್‌ಗೆ ಹೆಚ್ಚಿಸಲು ಯೋಚಿಸಲಾಗುತ್ತಿದೆ ಎಂದು ನೇಪಾಳ ಸರ್ಕಾರ ಸೋಮವಾರ ತಿಳಿಸಿದೆ.

ಪ್ರಸ್ತುತ 8,848.86 ಮೀಟರ್ ಎತ್ತರವಿರುವ ವಿಶ್ವದ ಅತಿ ಎತ್ತರದ ಪರ್ವತ ಏರಲು ಬಯಸುವ ವಿದೇಶಿ ಪರ್ವತಾರೋಹಿ 11,000 ಡಾಲರ್ ರಾಯಧನ ಶುಲ್ಕ ಹಾಗೂ ನೇಪಾಳಿ ಪರ್ವತಾರೋಹಿ ₹ 75,000 ಶುಲ್ಕ  ಪಾವತಿಸಬೇಕಾಗುತ್ತದೆ.

ಸರ್ಕಾರ ಕೊನೆ ಬಾರಿಗೆ 2015ರ ಜನವರಿಯಲ್ಲಿ ಶುಲ್ಕ ಪರಿಷ್ಕರಿಸಿತ್ತು.

2025ರಿಂದ ಮೌಂಟ್ ಎವರೆಸ್ಟ್ ಏರಲು ಬಯಸುವ ವಿದೇಶಿ ಪ್ರಜೆಗೆ 15,000 ಡಾಲರ್ ಹೊಸ ರಾಯಧನ ಶುಲ್ಕವನ್ನು ಪ್ರವಾಸೋದ್ಯಮ ಇಲಾಖೆ ಪ್ರಸ್ತಾಪಿಸಿದೆ ಎಂದು ಇಲಾಖೆಯ ವಕ್ತಾರ ಯುವರಾಜ್ ಖತಿವಾಡಾ ತಿಳಿಸಿದ್ದಾರೆ. ಪ್ರಸ್ತಾವವನ್ನು ಸಂಪುಟ ಅನುಮೋದಿಸಿದ ನಂತರ ಹೊಸ ಶುಲ್ಕ ಜಾರಿಗೆ ಬರಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT