ಮಾಸ್ಕೊ: ಭಾರತದ ವಿವಿಧ ರಾಜ್ಯಗಳಲ್ಲಿನ ಸಾಂಸ್ಕೃತಿಕ ವೈವಿದ್ಯತೆಯನ್ನು ಪ್ರತಿಬಿಂಬಿಸುವ ಒಂಬತ್ತು ದಿನಗಳ ‘ಭಾರತ ಉತ್ಸವ’ಕ್ಕೆ ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್ ಬಳಿ ಶನಿವಾರ ಚಾಲನೆ ದೊರೆಯಿತು.

ಭಾರತದ ರಾಯಭಾರ ಕಚೇರಿ ಮತ್ತು ರಷ್ಯಾದ ಪ್ರವಾಸೋದ್ಯಮ ಸಚಿವಾಲಯ ಜಂಟಿಯಾಗಿ ಈ ಉತ್ಸವ ಆಯೋಜಿಸಿವೆ. ಕ್ರೆಮ್ಲಿನ್ಗೆ ಸಮೀಪದ ಮನ್ಯೆಜ್ನಾಯ್ ಸ್ಕ್ವೇರ್ನಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಭಾರತೀಯ ಆಹಾರ ಖಾದ್ಯಗಳು ಮತ್ತು ಕರಕುಶಲ ವಸ್ತುಗಳ ಮಳಿಗೆಗಳನ್ನು ತೆರೆಯಲಾಗಿದೆ.

‘ಭಾರತ ಉತ್ಸವ’ಕ್ಕೆ ಚಾಲನೆ ನೀಡಿದ ರಾಯಭಾರಿ ವಿನಯ್ ಕುಮಾರ್ ಮಾತನಾಡಿ, ‘ಒಂಬತ್ತು ದಿನಗಳ ಈ ಉತ್ಸವದಲ್ಲಿ ದೆಹಲಿ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ನಾಗಾಲ್ಯಾಂಡ್ ರಾಜ್ಯಗಳ ನೃತ್ಯ ಮತ್ತು ಕಲಾ ಪ್ರಕಾರಗಳ ಮೂಲಕ ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯದ ಅನಾವರಣ ಆಗಲಿವೆ’ ಎಂದರು.

ಮಾಸ್ಕೊ ನಗರದ ಪ್ರವಾಸೋದ್ಯಮ ಸಮಿತಿಯ ಉಪ ಅಧ್ಯಕ್ಷ ಬುಲಾಟ್ ನೂರ್ಮುಖಾನೋವ್ ಮಾತನಾಡಿ, ‘ಕ್ರೆಮ್ಲಿನ್ಗೆ ಇಷ್ಟು ಸಮೀಪದಲ್ಲಿ ನಡೆಯುತ್ತಿರುವ ಈ ಉತ್ಸವವು ರಷ್ಯಾ ಮತ್ತು ಭಾರತದ ನಡುವೆ ಎಷ್ಟು ಆಳವಾದ ಸಂಬಂಧ ಇದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಎರಡೂ ದೇಶಗಳ ನಡುವಿನ ಜನರ ಮತ್ತು ನಾಯಕರ ನಡುವಿನ ಬಾಂಧವ್ಯ ಎಷ್ಟು ಗಾಢವಾಗಿದೆ ಎಂಬುದನ್ನೂ ಇದು ತೋರಿಸುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.