ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಬೆಲ್ ಶಾಂತಿ ಪ್ರಶಸ್ತಿ: ರೇಸ್‌ನಲ್ಲಿ ಟ್ರಂಪ್, ಕಿಮ್, ಮೂನ್

Last Updated 3 ಅಕ್ಟೋಬರ್ 2018, 14:20 IST
ಅಕ್ಷರ ಗಾತ್ರ

ಓಸ್ಲೊ: ಶುಕ್ರವಾರ ಪ್ರಕಟವಾಗಲಿರುವ ನೊಬೆಲ್ ಶಾಂತಿ ಪ್ರಶಸ್ತಿಯತ್ತ ಎಲ್ಲರ ದೃಷ್ಟಿ ನೆಟ್ಟಿದೆ. ವ್ಯಕ್ತಿಗಳು, ಸಂಘ ಸಂಸ್ಥೆಗಳು ಸೇರಿ 331 ಪ್ರಸ್ತಾವಗಳು ಸಮಿತಿ ಮುಂದಿವೆ.

ಕೊರಿಯಾ ದ್ವೀಪದಲ್ಲಿ ಶಾಂತಿ ಸ್ಥಾಪನೆಗೆ ಮುಂದಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಮುಂಚೂಣಿಯಲ್ಲಿದ್ದಾರೆ. ಕೇವಲ ಇದರ ಅಧಾರದಲ್ಲಿ ಪ್ರಶಸ್ತಿ ನೀಡುವುದು ಅಪಕ್ವ ನಿರ್ಧಾರವಾಗಬಲ್ಲದು ಎಂದು ಸ್ಟಾಕ್‌ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾನ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.

ಎರಿಟ್ರಿಯಾ ಹಾಗೂ ಇಥಿಯೋಪಿಯಾ ಮಧ್ಯೆ 20 ವರ್ಷಗಳ ಬಳಿಕ ಸಾಮರಸ್ಯಮೂಡಿದೆ. ಇದಕ್ಕೆ ಶ್ರಮಿಸಿದ ಇಥಿಯೋಪಿಯಾ ಪ್ರಧಾನಿ ಅಬಿಯ್ ಅಹ್ಮದ್ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.

ಲೈಂಗಿಕ ದೌರ್ಜನ್ಯ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಕಾಂಗೊದ ಸ್ತ್ರೀರೋಗ ತಜ್ಞ ಡೆನಿಸ್ ಮುವ್ಚೆಜ್, ಯಾಜಿಡಿ ಅತ್ಯಾಚಾರ ಸಂತ್ರಸ್ತೆ ಹಾಗೂ ಮಾನವ ಹಕ್ಕು ಕಾರ್ಯರ್ತೆ ಇರಾಕ್‌ನ ನಾಡಿಯಾ ಮುರಾದ್ ಕೂಡಾ ಇದ್ದಾರೆ.ಲಕ್ಷಾಂತರ ಜನರ ಹಸಿವು ನೀಗಿಸುತ್ತಿರುವ ವಿಶ್ವಸಂಸ್ಥೆಯ ‘ಜಾಗತಿಕ ಆಹಾರ ಕಾರ್ಯಕ್ರಮ’ಕ್ಕೂ (ಡಬ್ಲ್ಯೂಎಫ್‌ಪಿ) ಪ್ರಶಸ್ತಿಯ ಸಲ್ಲುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT