ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪಗ್ರಹ ಉಡಾವಣೆಗೆ ಉತ್ತರ ಕೊರಿಯಾ ಸಿದ್ಧತೆ: ಜಪಾನ್

Published 27 ಮೇ 2024, 14:06 IST
Last Updated 27 ಮೇ 2024, 14:06 IST
ಅಕ್ಷರ ಗಾತ್ರ

ಸೋಲ್: ಜೂನ್ 3ರ ಒಳಗಾಗಿ ಉಪಗ್ರಹ ಉಡಾವಣೆ ಮಾಡುವ ಯೋಜನೆ ಹೊಂದಿರುವುದಾಗಿ ಉತ್ತರ ಕೊರಿಯಾ ತನಗೆ ಮಾಹಿತಿ ನೀಡಿದೆ ಎಂದು ಜಪಾನ್ ಸೋಮವಾರ ತಿಳಿಸಿದೆ.  

‘ಸ್ಯಾಟಲೈಟ್ ರಾಕೆಟ್’ ಉಡಾವಣೆಯ ಈ ಪ್ರಕ್ರಿಯೆಯು ಸೋಮವಾರ ಆರಂಭವಾಗಿ ಮಧ್ಯರಾತ್ರಿಯವರೆಗೂ ಮುಂದುವರಿಯಬಹುದು ಎಂದು ಉತ್ತರ ಕೊರಿಯಾ ತಿಳಿಸಿದೆ ಎಂದು ಜಪಾನ್ ಕರಾವಳಿ ಕಾವಲುಪಡೆ ತಿಳಿಸಿದೆ. ಉತ್ತರ ಕೊರಿಯಾದ 2ನೇ ಮಿಲಿಟರಿ ‘ಗೂಢಚಾರ’ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡುವ ಯತ್ನ ಇದಾಗಿರಬಹುದು ಎನ್ನಲಾಗಿದೆ. 

ಇದಕ್ಕೆ ಪೂರಕ ಎಂಬಂತೆ 2024ರಲ್ಲಿ ದೇಶವು ಮೂರು ಹೆಚ್ಚುವರಿ ಮಿಲಿಟರಿ ಗೂಢಚಾರ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ ಎಂದು ಆಡಳಿತಾತ್ಮಕ ಪಕ್ಷದ ಸಭೆಯ ಬಳಿಕ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಿಳಿಸಿದ್ದಾರೆ. 

ಉತ್ತರ ಕೊರಿಯಾದ ವಾಯವ್ಯ ಭಾಗದಲ್ಲಿರುವ ಟಾಂಗ್‌ಚಾಂಗ್ರಿ ಉಪಗ್ರಹ ಉಡಾವಣೆ ಕೇಂದ್ರದಲ್ಲಿ 2ನೇ ಗೂಢಚಾರ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿರುವುದನ್ನು ಪತ್ತೆಹಚ್ಚಿದ್ದಾಗಿ ದಕ್ಷಿಣ ಕೊರಿಯಾ ಶುಕ್ರವಾರ ಆರೋಪಿಸಿತ್ತು.

ಕಳೆದ ವರ್ಷದ ನವೆಂಬರ್‌ನಲ್ಲಿ ಉತ್ತರ ಕೊರಿಯಾವು ತನ್ನ ಮೊದಲ ಮಿಲಿಟರಿ ಭೂ ಪರಿಶೀಲನೆ ಉಪಗ್ರಹವನ್ನು ಕಕ್ಷೆಗೆ ಕಳುಹಿಸಿತ್ತು. ಇದು ಅಮೆರಿಕದ ಸೇನೆಯ ಮೇಲೆ ನಿಗಾವಹಿಸಲು ಬಾಹ್ಯಾಕಾಶ ಆಧಾರಿತ ಕಣ್ಗಾವಲು ನೆಟ್‌ವರ್ಕ್‌ನ ಭಾಗವಾಗಿತ್ತು.

ಉಪಗ್ರಹ ಉಡಾವಣೆಯ ಸೋಗಿನಲ್ಲಿ ತನ್ನ ದೂರಗಾಮಿ ಕ್ಷಿಪಣಿ ತಂತ್ರಜ್ಞಾನವನ್ನು ಪರೀಕ್ಷಿಸುತ್ತದೆ ಎಂಬ ಕಾರಣಕ್ಕೆ ಉಪಗ್ರಹ ಉಡಾವಣೆ ಮಾಡದಂತೆ ಉತ್ತರ ಕೊರಿಯಾದ ಮೇಲೆ ವಿಶ್ವಸಂಸ್ಥೆ ನಿರ್ಬಂಧ ಹೇರಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT