ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ತಡೆ; ರ್‍ಯಾಲಿ, ಪ್ರವಾಸ ಸ್ಥಗಿತ

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡೆನ್ ಪ್ರತಿಪಾದನೆ
Last Updated 27 ಅಕ್ಟೋಬರ್ 2020, 6:39 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ನಾನು ಕೋವಿಡ್‌ 19 ಸಾಂಕ್ರಾಮಿಕ ಹರಡುವ ‘ಸೂಪರ್ ಸ್ಪ್ರೆಡರ್‌‘ ಆಗಬಾರದು ಎಂಬ ಕಾರಣಕ್ಕಾಗಿಯೇ ಸಾರ್ವಜನಿಕ ರ್‍ಯಾಲಿಗಳನ್ನು ಹೆಚ್ಚಾಗಿ ಆಯೋಜಿಸದಿರಲು, ಹೆಚ್ಚು ಪ್ರಯಾಣ ಮಾಡದಿರಲು ನಿರ್ಧರಿಸಿದ್ದೇನೆ‘ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡೆನ್ ಪ್ರತಿಪಾದಿಸಿದ್ದಾರೆ.

ಅಮೆರಿಕದಲ್ಲಿ ನಿತ್ಯ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ಈ ವಾರ ಬಹುತೇಕ ರಾಷ್ಟ್ರಗಳಲ್ಲಿ ಗರಿಷ್ಠ ಹೊಸ ಪ್ರಕರಣಗಳು ದಾಖಲಾದ ವರದಿಯಾಗಿದೆ. ಇದೇ ವಾರ ಮೊಂಟಾನಾ, ಉತ್ತರ ಕ್ಯಾಲಿರ್ಫೋನಿಯಾ, ದಕ್ಷಿಣ ಡಕೋಟಾ, ವಿಸ್ಕಾನ್ಸಿನ್ ಮತ್ತು ವ್ಯೋಮಿಂಗ್‌ನಲ್ಲಿ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

‘ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನನ್ನ ಪ್ರವಾಸವನ್ನು ಮೊಟಕುಗೊಳಿಸಿದ್ದೇನೆ. ನಾನು ಕೊರೊನಾ ಸೋಂಕು ಹರಡಲು ಬಯಸುವುದಿಲ್ಲ. ಎಲ್ಲರೂ ಮುಖಗವಸು ಧರಿಸುತ್ತಿದ್ದಾರೆ. ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ನಾನು ಕೂಡ ಅದನ್ನೇ ಪಾಲಿಸುತ್ತಿದ್ದೇನೆ. ನಾವು ಇಂತಹ ಸಮಯದಲ್ಲಿ ಜವಬ್ದಾರಿಯುತವಾಗಿ ನಡೆದುಕೊಳ್ಳಬೇಕು’ ಎಂದು ಬೈಡನ್‌ ಅವರು ಹೇಳಿದರು.

‘ಡೊನಾಲ್ಡ್‌ ಟ್ರಂಪ್‌ ಅತ್ಯಂತ ಕೆಟ್ಟ ಅಧ್ಯಕ್ಷ. ಈ ಪರಿಸ್ಥಿತಿಯಲ್ಲಿ ಅಮೆರಿಕವನ್ನು ಮುನ್ನಡೆಸಲು ಅವರು ಸೂಕ್ತ ವ್ಯಕ್ತಿಯಲ್ಲ. ಕೊರೊನಾ ವೈರಸ್‌ ಅನ್ನು ನಿಯಂತ್ರಿಸಲು ಯಾವ ರೀತಿಯ ಕ್ರಮಗೈಗೊಳ್ಳಬೇಕು ಎಂಬುದರ ಬಗ್ಗೆ ಅವರಿಗೆ ಅರಿವಿಲ್ಲ. ಇಲ್ಲವಾದಲ್ಲಿ ಅವರಿಗೆ ಈ ಬಗ್ಗೆ ಯಾವುದೇ ಚಿಂತೆಯೇ ಇಲ್ಲ’ ಎಂದು ಬೈಡನ್‌ ವಾಗ್ದಾಳಿ ನಡೆಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT