ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾ ಅತಿಕ್ರಮಿತ ಉಕ್ರೇನ್: ಶೆಲ್‌ ದಾಳಿಗೆ 25 ಮಂದಿ ಸಾವು

Published 21 ಜನವರಿ 2024, 13:25 IST
Last Updated 21 ಜನವರಿ 2024, 13:25 IST
ಅಕ್ಷರ ಗಾತ್ರ

ಕೀವ್‌: ರಷ್ಯಾ ಅತಿಕ್ರಮಿಸಿಕೊಂಡಿರುವ ಉಕ್ರೇನ್‌ನ ಡೊನೆಟ್ಸ್ಕ್ ನಗರದ ಹೊರವಲಯದ ಮಾರುಕಟ್ಟೆಯೊಂದರಲ್ಲಿ ಭಾನುವಾರ ಶೆಲ್‌ ದಾಳಿಗೆ 25 ಮಂದಿ ಮೃತಪಟ್ಟಿದ್ದಾರೆ.

ಉಕ್ರೇನ್‌ನ ಸೇನಾಪಡೆ ನಡೆಸಿರುವ ಶೆಲ್‌ ದಾಳಿಯಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ 20 ಮಂದಿ ಗಾಯಗೊಂಡಿರುವುದಾಗಿ ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಉಕ್ರೇನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಉಕ್ರೇನ್‌ ಪಡೆಗಳು ಡ್ರೋನ್‌ ದಾಳಿ ನಡೆಸಿದ ಪರಿಣಾಮವಾಗಿ ರಷ್ಯಾದ ಅಸ್ಟ್‌–ಲೂಗಾ ಬಂದರಿನಲ್ಲಿ ನೈಸರ್ಗಿಕ ಅನಿಲ ಟ್ಯಾಂಕ್‌ ಸ್ಫೋಟಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಫೋಟ ನಡೆದ ಸ್ಥಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓರ್ಯೋಲ್‌ ಮತ್ತು ಟುಲಾ ಪ್ರದೇಶದಲ್ಲಿ ಉಕ್ರೇನ್‌ನ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಉಕ್ರೇನ್‌ನ ಗ್ರಾಮ ವಶಪಡಿಸಿಕೊಂಡ ರಷ್ಯಾ:

ಉಕ್ರೇನ್‌ನ ಹಾರ್ಕಿವ್ ಪ್ರದೇಶದ ಕ್ರೋಖ್‌ಮಲ್ನೆ ಗ್ರಾಮವನ್ನು ರಷ್ಯಾದ ಸೇನಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೋಖ್‌ಮಲ್ನೆ ಗ್ರಾಮದಿಂದ ಸೈನಿಕರನ್ನು ಹಿಂಪಡೆದಿರುವುದಾಗಿ ಉಕ್ರೇನ್‌ನ ಸೇನಾಪಡೆಯ ವಕ್ತಾರರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT