ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹೃತ ಹಿಂದೂ ಬಾಲಕಿಗೆ ವಿವಾಹ

ಬಲವಂತದ ಮತಾಂತರ, ವಿವಾಹ: ಕಠಿಣ ಕ್ರಮಕ್ಕೆ ಮುಂದಾದ ಪಾಕಿಸ್ತಾನ
Last Updated 27 ಮಾರ್ಚ್ 2019, 18:25 IST
ಅಕ್ಷರ ಗಾತ್ರ

ಇಸ್ಲಾಮಾಬಾದ್:ಸಿಂಧ್‌ ಪ್ರಾಂತದ ಬದಿನ್ ಜಿಲ್ಲೆಯಿಂದ ಮಂಗಳವಾರ ಅಪಹರಣವಾಗಿದ್ದಳು ಎನ್ನಲಾದ ಬಾಲಕಿಯನ್ನು ವಿವಾಹವಾಗಿರುವುದಾಗಿ ವ್ಯಕ್ತಿಯೊಬ್ಬ ಹೇಳಿಕೊಂಡಿದ್ದಾನೆ.

‘ಹಿಂದೂ ಯುವತಿ ಮಾರ್ಚ್ 17ರಂದು ಸಮರಾವೊ ಪಟ್ಟಣದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಆಕೆಯನ್ನು ವಿವಾಹವಾಗಿದ್ದೇನೆ. ಆಕೆಯ ತಂದೆ ಹೇಳಿರುವಂತೆ ಅಪ್ರಾಪ್ತ ಳಲ್ಲ. ಅವಳಿಗೆ19 ವರ್ಷವಾಗಿದೆ’ ಎಂದು ಆತ ತಿಳಿಸಿದ್ದಾನೆ.

ಡಾನ್ ಪತ್ರಿಕೆ ಈ ವಿಷಯ ವರದಿ ಮಾಡಿದೆ.

‘ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪತ್ರಕರ್ತರಿಗೆ ಕಳುಹಿಸಿದ್ದಾನೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ನಾಲ್ವರು ಸಶಸ್ತ್ರಧಾರಿಗಳು 14 ವರ್ಷದ ನನ್ನ ಮಗಳನ್ನು ಮನೆಯಿಂದ ಅಪಹರಿಸಿದ್ದಾರೆ’ ಎಂದು ಬಾಲಕಿ ತಂದೆ ದೂರು ಸಲ್ಲಿಸಿದ್ದರು.

ರಕ್ಷಣೆ ಒದಗಿಸಲು ಸೂಚನೆ: ಇದೇ ಪ್ರಕರಣಸಂಬಂಧ, ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಹರಿರಾಮ್ ಕಿಶೋರಿ ಲಾಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಬಾಲಕಿ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆಯೂ ಹೇಳಿದ್ದಾರೆ.

ಘೋಟ್ಕಿ ಜಿಲ್ಲೆಯಿಂದ ಇಬ್ಬರು ಬಾಲಕಿಯರನ್ನು ಅಪಹರಣ ಮಾಡಿ, ಬಲವಂತದಿಂದ ಇಸ್ಲಾಂಗೆ ಮತಾಂತರಗೊಳಿಸಿ ವಿವಾಹ ಮಾಡಿರುವ ಪ್ರಕರಣಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಈ ಬೆಳವಣಿಗೆಯಾಗಿದೆ.

ಹೆಚ್ಚಿನ ಶಿಕ್ಷೆ

ಇಸ್ಲಾಮಾಬಾದ್ (ಪಿಟಿಐ):ಬಲವಂತದ ಮತಾಂತರದಲ್ಲಿ ತೊಡಗಿದವರಿಗೆ ಹೆಚ್ಚಿನ ಶಿಕ್ಷೆ ವಿಧಿಸುವ ಹಾಗೂ ಬಾಲ್ಯ ವಿವಾಹವನ್ನು ಕಾನೂನಾರ್ಹ ಅಪರಾಧ ಎಂದು ಘೋಷಿಸುವ ಪ್ರಸ್ತಾವನೆ ಇರುವ ಎರಡು ಮಸೂದೆಗಳು ಪಾಕಿಸ್ತಾನ ಸಂಸತ್ತಿನಲ್ಲಿ ಮಂಡನೆಯಾಗಿವೆ.

ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್ –ಎ–ಇನ್ಸಾಫ್ (ಪಿಟಿಐ) ಪಕ್ಷದ ಹಿಂದು ಸಂಸದರಾಗಿರುವ ಡಾ.ರಮೇಶ್ ಕುಮಾರ್ ವಂಕ್ವಾನಿ ಅವರು ಈ ಮಸೂದೆಗಳನ್ನು ಮಂಡಿಸಿದ್ದಾರೆ.ಇಂತಹ ಪ್ರಕರಣಗಳನ್ನು ಖಂಡಿಸಿ ಎಲ್ಲಾ ಪ್ರಮುಖ ಪಕ್ಷಗಳ ಅಲ್ಪಸಂಖ್ಯಾತ ಸಂಸದರು ಕೈಗೊಂಡಿರುವ ನಿರ್ಣಯವನ್ನು ಸಹ ಮಸೂದೆ ಜತೆ ಮಂಡಿಸಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಈ ನಿರ್ಣಯದ ಮೂಲಕ, ಬಲವಂತದ ಮತಾಂತರದಲ್ಲಿ ತೊಡಗಿರುವ ವಿವಾದಾತ್ಮಕ ಧಾರ್ಮಿಕ ಮುಖಂಡರು ಸೇರಿದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT