ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ‌19 ಸಚಿವರ ಪದಗ್ರಹಣ– ಸಂಪುಟದಲ್ಲಿ ಓರ್ವ ಮಹಿಳೆಗೆ ಸ್ಥಾನ

Published 11 ಮಾರ್ಚ್ 2024, 11:37 IST
Last Updated 11 ಮಾರ್ಚ್ 2024, 11:37 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಸಂಪುಟಕ್ಕೆ 19 ಮಂದಿ ಸಚಿವರು ಸೇರ್ಪಡೆಯಾಗಿದ್ದಾರೆ. ಈ ಎಲ್ಲರಿಗೂ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಪ್ರಮಾಣವಚನ ಬೋಧಿಸಿದರು.

ಅಧ್ಯಕ್ಷರ ನಿವಾಸದಲ್ಲಿ ಸೋಮವಾರ ನೂತನ ಸಚಿವರ ಪದಗ್ರಹಣ ಸಮಾರಂಭ ನಡೆಯಿತು.

ಇಸಾಕ್ ದಾರ್‌, ಖವಾಜ ಆಸಿಫ್‌, ಅಹ್ಸನ್ ಇಕ್ಬಾಲ್, ಮುಹಮ್ಮದ್ ಔರಂಗಜೇಬ್, ಅಜಮ್ ತರಾರ್, ರಾಣಾ ತನ್ವೀರ್, ಮೊಹ್ಸಿನ್ ನಖ್ವಿ, ಅಹದ್ ಚೀಮಾ, ಖಾಲಿದ್ ಮಕ್ಬೂಲ್ ಸಿದ್ದಿಕಿ, ರಿಯಾಜ್ ಪ್ರಿಜಾದಾ, ಖೈಸರ್ ಶೇಖ್, ಶಾಜ ಫಾತಿಮಾ, ಅಲೀಮ್ ಖಾನ್, ಜಮ್ ಕಮಾಲ್, ಅಮೀರ್ ಮುಕಾಮ್, ಅವೈಸ್ ಲೆಘರಿ, ಅಟ್ಟಾ ತರ್ಸಿಯಾನ್ ಮತ್ತು ಸಲೀಕ್ ತರ್ಸಿಯಾನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ನೂತನ ಸಚಿವರಿಗೆ ಖಾತೆಗಳ ಹಂಚಿಕೆ ನಡೆಯಬೇಕಿದೆ.

ಔರಂಗಜೇಬ್‌ಗೆ ಹಣಕಾಸು ಖಾತೆ ಸಿಗುವ ಸಾಧ್ಯತೆ ಇದ್ದು, ಇಸಾಕ್ ದಾರ್‌ಗೆ ವಿದೇಶಾಂಗ ಖಾತೆ ಲಭಿಸುವ ಸಂಭವ ಇದೆ. ಅಹದ್ ಚೀಮಾ ಅವರು ಕಾಶ್ಮೀರ ವ್ಯವಹಾರಗಳ ಸಚಿವರಾಗುವ ಸಾಧ್ಯತೆ ಇದೆ. ಶಾಜ ಫಾತಿಮ ಸಂಪುಟದಲ್ಲಿರುವ ಏಕೈಕ ಮಹಿಳೆ.

ಸಚಿವರಾಗಿರುವ ಮೊಹ್ಸಿನ್ ನಖ್ವಿ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ)ನ ಅಧ್ಯಕ್ಷರೂ ಕೂಡ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT