ಇಸ್ಲಾಮಾಬಾದ್ (ಪಿಟಿಐ): ಬಂಧನದಲ್ಲಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರ ವಿರುದ್ಧ ಅಲ್–ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯುರೊ(ಎನ್‌ಎಬಿ) ನ್ಯಾಯಾಲಯವು ದೋಷಾರೋಪ ನಿಗದಿ ಮಾಡಿದೆ.

ಇಮ್ರಾನ್ ಖಾನ್ ಇರುವ ರಾವಲ್ಪಿಂಡಿಯ ಆಡಿಯಾಲ ಕಾರಾಗೃಹದಲ್ಲಿಯೇ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ವಿಚಾರಣೆ ನಡೆಸಿದರು. ನಂತರ ದಂಪತಿ ಸಮಕ್ಷಮದಲ್ಲಿ ದೋಷಾರೋಪ ಪಟ್ಟಿ ಓದಿದರು.

ಖಾನ್ ಮತ್ತು ಅವರ ಪತ್ನಿ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದರು. ನಂತರ ಪ್ರಕರಣದ ವಿಚಾರಣೆಯನ್ನು ಮಾ.6ಕ್ಕೆ ಮುಂದೂಡಲಾಯಿತು.

ಇಮ್ರಾನ್ ಖಾನ್ ಮತ್ತು ಅವರ ಮೂರನೇ ಪತ್ನಿ ಬುಶ್ರಾ ಬೀಬಿ ಅವರು 2018ರಲ್ಲಿ ಸ್ಥಾಪಿಸಿದ್ದ ಅಲ್–ಖಾದಿರ್ ಸರ್ಕಾರೇತರ ಸಂಸ್ಥೆಯು ರಿಯಲ್ ಎಸ್ಟೇಟ್ ಡೆವಲಪರ್ ಮಲಿಕ್ ರಿಯಾಜ್ ಹುಸೇನ್ ಅವರಿಂದ 60 ಎಕರೆ ಭೂಮಿಯನ್ನು ಲಂಚವಾಗಿ ಪಡೆದಿದೆ. ಆ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.