ಘಟನೆಯ ಕುರಿತು ಡಾನ್ ಪತ್ರಿಕೆಯೊಂದಿಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಜುಬೇರ್ ನಜೀರ್ ಶೇಖ್, ‘ಸದ್ದಾರ್ ಪ್ರದೇಶದಲ್ಲಿರುವ ಹಳೆಯ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಬಳಿ ಮನುಷ್ಯನ ಕೈಯ ಭಾಗಗಳು ಬಿದ್ದಿರುವುದು ಕಂಡುಬಂದಿದೆ ಎಂದು ನಮಗೆ ಕರೆಬಂದಿತು. ನಮ್ಮ ತಂಡವು ಸ್ಥಳಕ್ಕೆ ತೆರಳಿ ಫ್ಲ್ಯಾಟ್ನ ಕದ ತೆರೆಯಿತು. ಅಲ್ಲಿ ಮನೆಯ ತುಂಬಾ ದೇಹವೊಂದರ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನೆಯಲ್ಲಿದ್ದ ಮಹಿಳೆ ಗಾಢ ನಿದ್ದೆಗೆ ಜಾರಿದ್ದಳು’ ಎಂದು ತಿಳಿಸಿದ್ದಾರೆ.
‘45 ವರ್ಷದ ಮಹಿಳೆಯನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ವಾರದ ಹಿಂದೆಯೇ ಕೊಲೆ ನಡೆದಿರುವ ಸಾಧ್ಯತೆಯಿದ್ದರೂ ಕೊಲೆಯ ದಿನಾಂಕ ಇನ್ನೂ ಖಚಿತವಾಗಿಲ್ಲ’ ಎಂದು ಶೇಕ್ ಮಾಹಿತಿ ನೀಡಿದ್ದಾರೆ.