ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಹರಂ: ದ್ವೇಷ ಹರಡುವಿಕೆ ತಡೆಗೆ ಸಾಮಾಜಿಕ ಮಾಧ್ಯಮಗಳಿಗೆ ಪಾಕ್‌ನಲ್ಲಿ ನಿರ್ಬಂಧ

Published 5 ಜುಲೈ 2024, 6:02 IST
Last Updated 5 ಜುಲೈ 2024, 6:02 IST
ಅಕ್ಷರ ಗಾತ್ರ

ಲಾಹೋರ್: ಪವಿತ್ರ ಮೊಹರಂ ಮಾಸದಲ್ಲಿ ದ್ವೇಷ ಹರಡುವುದನ್ನು ನಿಯಂತ್ರಿಸಲು ಜುಲೈ 13ರಿಂದ 18ರವರೆಗೆ ಆರು ದಿನಗಳ ಕಾಲ ಎಲ್ಲ ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

ಮೊಹರಂ ಹಬ್ಬದ ಪ್ರಯುಕ್ತ ಜುಲೈ 13 ರಿಂದ 18ರವರೆಗೆ ಸಾಮಾಜಿಕ ಮಾಧ್ಯಮಗಳಾದ ಯೂಟ್ಯೂಬ್‌, ವ್ಯಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ಟಿಕ್‌ಟಾಕ್‌ ಅನ್ನು ನಿರ್ಬಂಧಿಸುವಂತೆ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್‌ ನವಾಜ್ ಅವರ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ದ್ವೇಷದ ವಿಷಯಗಳನ್ನು ನಿಯಂತ್ರಿಸಲು, ಹಿಂಸಾಚಾರವನ್ನು ತಪ್ಪಿಸಲು, ತಪ್ಪು ಮಾಹಿತಿಗಳನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಗುರುವಾರ ತಡರಾತ್ರಿ ಹೊರಡಿಸಿಲಾದ ಪಂಜಾಬ್‌ ಸರ್ಕಾರದ ಅಧಿಸೂಚನೆ ತಿಳಿಸಿದೆ.

ಆರು ದಿನಗಳ ಕಾಲ ಇಂಟರ್‌ನೆಟ್‌ನಲ್ಲಿರುವ ಎಲ್ಲ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿರ್ಬಂಧಿಸುವಂತೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್ ಅವರ ಸರ್ಕಾರಕ್ಕೆ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್‌ ನವಾಜ್ ಸರ್ಕಾರ ವಿನಂತಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT