ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಲ್‌ ಆಫ್‌ ಶೇಮ್‌’ ನೆಲಸಮಕ್ಕೆ ಪೆರು ಕೋರ್ಟ್‌ ಆದೇಶ

Last Updated 30 ಡಿಸೆಂಬರ್ 2022, 16:32 IST
ಅಕ್ಷರ ಗಾತ್ರ

ಲಿಮಾ, ಪೆರು (ಎಎಫ್‌ಪಿ): ಶ್ರೀಮಂತರು ಮತ್ತು ಬಡವರನ್ನು ಪ್ರತ್ಯೇಕಿಸುತ್ತಿದ್ದ ಗೋಡೆಯನ್ನು ನೆಲಸಮ ಮಾಡುವಂತೆ ಪೆರುವಿನ ಕೋರ್ಟ್‌ ಆದೇಶಿಸಿದೆ.

‘ಇದು ತಾರತಮ್ಯದ ಗೋಡೆ..ಸಾಮಾಜಿಕ ಸ್ತರದ ಆಧಾರದಲ್ಲಿ ಪೆರು ಜನರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅದು ಸ್ವೀಕಾರಾರ್ಹವೂ ಅಲ್ಲ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಗೋಡೆಯನ್ನು ನೆಲಸಮ ಮಾಡಲು 180 ದಿನಗಳ ಗಡುವು ನಿಗದಿ ಮಾಡಿದೆ.

‘ವಾಲ್‌ ಆಫ್‌ ಶೇಮ್‌’ ಎಂದು ಕರೆಯಲಾಗುವ ಗೋಡೆಯು 10 ಕಿ.ಮೀ ಉದ್ದ ಮತ್ತು ಕೆಲವು ಕಡೆಗಳಲ್ಲಿ 2 ಮೀಟರ್‌ ಎತ್ತರವಿದೆ. ಗೋಡೆಯ ಮೇಲೆ ಮುಳ್ಳಿನ ತಂತಿಗಳನ್ನು ಹಾಕಲಾಗಿದೆ.1980ರಲ್ಲಿ ಗೋಡೆಯನ್ನು ನಿರ್ಮಿಸಲಾಗಿತ್ತು. ಅನಂತರವೂ ಅಕ್ರಮ ಭೂ ಒತ್ತುವರಿ ತಡೆಗೆ ಗೋಡೆಯನ್ನು ವಿಸ್ತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT