ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಪ್ಪೀನ್ಸ್: ಮುಖ್ಯ ನ್ಯಾಯಮೂರ್ತಿ ಉಚ್ಛಾಟನೆ

Last Updated 19 ಜೂನ್ 2018, 18:13 IST
ಅಕ್ಷರ ಗಾತ್ರ

ಮನಿಲಾ: ಫಿಲಿಪ್ಪೀನ್ಸ್‌ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಮರಿಯಾ ಲೌರ್ಡ್ಸ್ ಸೆರೆನೊ ಅವರ ಉಚ್ಚಾಟನೆ ಆದೇಶವನ್ನು ಸುಪ್ರೀಂಕೋರ್ಟ್‌ನ 15 ನ್ಯಾಯಮೂರ್ತಿಗಳ ಪೀಠ ಸೋಮವಾರ ಎತ್ತಿ ಹಿಡಿದಿದೆ.

ಈ ತೀರ್ಪು ಅಸಾಂವಿಧಾನಿಕ, ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುತ್ತದೆಹಾಗೂ ದೇಶದ ದುರ್ಬಲ ಪ್ರಜಾಪ್ರಭು‌ತ್ವವನ್ನು ಪ್ರತಿನಿಧಿಸುತ್ತದೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ಆದೇಶದ ಪರ 8 ಹಾಗೂ ವಿರುದ್ಧವಾಗಿ 6 ಮತ ಚಲಾವಣೆಯಾಗುವ ಮೂಲಕ ಉಚ್ಚಾಟನೆಯನ್ನು ಪೀಠವು ಎತ್ತಿಹಿಡಿದಿದೆ ಎಂದು ಕೋರ್ಟ್ ವಕ್ತಾರ ಥಿಯೋಡೊರ್ ಟೆ ತಿಳಿಸಿದ್ದಾರೆ.ಅಧ್ಯಕ್ಷ ರೊಡ್ರಿಗೊ ಡುಟೆಟ್ರೆ ಅವರು 90 ದಿನಗಳಲ್ಲಿ ಹೊಸ ಮುಖ್ಯನ್ಯಾಯಮೂರ್ತಿಯನ್ನು ನೇಮಿಸಲಿದ್ದಾರೆ.

ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ಮರಿಯಾ ತಳ್ಳಿಹಾಕಿದ್ದಾರೆ. ಅಲ್ಲದೆ ಹುದ್ದೆಯಿಂದ ತಮ್ಮನ್ನು ತೆಗೆದುಹಾಕಿದ್ದರ ಸಾಂವಿಧಾನಿಕ ಔಚಿತ್ಯವನ್ನು ಅವರು ಪ್ರಶ್ನಿಸಿದ್ದಾರೆ. ಸಂಸತ್ತಿನಲ್ಲಿ ವಾಗ್ದಂಡನೆ ಮೂಲಕ ಮಾತ್ರ ತಮ್ಮನ್ನು ಉಚ್ಚಾಟಿಸಲು ಅವಕಾಶವಿದೆ. ಕೋರ್ಟ್‌ಗೆ ಈ ಅಧಿಕಾರ ಇಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT