ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಗ್ರೀಸ್‌ ದೇಶದ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್' ಪ್ರಶಸ್ತಿ

Published 25 ಆಗಸ್ಟ್ 2023, 10:04 IST
Last Updated 25 ಆಗಸ್ಟ್ 2023, 10:04 IST
ಅಕ್ಷರ ಗಾತ್ರ

ಅಥೆನ್ಸ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಕ್ ಸರ್ಕಾರ ಶುಕ್ರವಾರ ಪ್ರತಿಷ್ಠಿತ ‘ಗ್ರ್ಯಾಂಡ್‌ ಕ್ರಾಸ್ ಆಫ್‌ ದ ಆರ್ಡರ್’ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಗ್ರೀಕ್‌ ಅಧ್ಯಕ್ಷೆ ಕಟೆರಿನ ಎನ್‌ ಸಕೆಲ್ಲಾರೊಪೌಲೌ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಪ್ರಶಸ್ತಿಗೆ ಪಾತ್ರರಾದ ವಿದೇಶದ ಮೊದಲ ಮುಖ್ಯಸ್ಥ ಎಂಬ ಹಿರಿಮೆಗೂ ಮೋದಿ ಪಾತ್ರರಾದರು.

ಈ ಕುರಿತ ಹೇಳಿಕೆಯಲ್ಲಿ ವಿದೇಶಾಂಗ ಸಚಿವಾಲಯವು, ಪ್ರಶಸ್ತಿ ಪ್ರದಾನ ಸಮಾರಂಭ ಅಥೆನ್ಸ್‌ನಲ್ಲಿ ಅಧ್ಯಕ್ಷರ ನಿವಾಸದಲ್ಲಿ ನಡೆಯಿತು ಎಂದು ತಿಳಿಸಿದೆ. ‘ಪ್ರಶಸ್ತಿ ಗ್ರೀಕ್‌ ಭಾರತದ ಬಗ್ಗೆ ಹೊಂದಿರುವ ಗೌರವದ ದ್ಯೋತಕವಾಗಿದೆ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ಈ ಪ್ರಶಸ್ತಿಯನ್ನು ಭಾರತದಲ್ಲಿನ ಎಲ್ಲ ಮಕ್ಕಳಿಗೆ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT