ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ವಿಮಾನ ಎಂಜಿನ್ ತಯಾರಿಕೆ: ಫ್ರಾನ್ಸ್‌ ರಕ್ಷಣಾ ಸಚಿವರೊಂದಿಗೆ ರಾಜನಾಥ ಚರ್ಚೆ

Published 12 ಅಕ್ಟೋಬರ್ 2023, 6:29 IST
Last Updated 12 ಅಕ್ಟೋಬರ್ 2023, 6:29 IST
ಅಕ್ಷರ ಗಾತ್ರ

ನವದೆಹಲಿ: ಫ್ರಾನ್ಸ್ ಪ್ರವಾಸದಲ್ಲಿರುವ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಫ್ರಾನ್ಸ್ ರಕ್ಷಣಾ ಸಚಿವ ಸೆಬಾಸ್ಟೀನ್ ಲೆಕೊರ್ನು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜನಾಥ ಸಿಂಗ್, ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವಣ ಕಾರ್ಯತಂತ್ರದ ಪಾಲುದಾರಿಕೆ ಎಂದಿಗಿಂತಲೂ ಹೆಚ್ಚು ಪ್ರಸ್ತುತವೆನಿಸಿದ್ದು, ಉಭಯ ದೇಶಗಳು ಈ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲು ಎದುರು ನೋಡುತ್ತಿವೆ ಎಂದು ಹೇಳಿದ್ದಾರೆ.

ಪ್ಯಾರಿಸ್ ಬಳಿ ಫ್ರೆಂಚ್ ಸಂಸ್ಥೆಯ ಸಫ್ರಾನ್ ಜೆಟ್ ಎಂಜಿನ್ ತಯಾರಿಕಾ ಘಟಕಕ್ಕೆ ಬುಧವಾರ ಭೇಟಿ ನೀಡಿದ್ದ ರಾಜನಾಥ ಸಿಂಗ್, ಏರೋ-ಎಂಜಿನ್ ತಂತ್ರಗಾರಿಕೆಯನ್ನು ವೀಕ್ಷಿಸಿದರು.

ರಾಜನಾಥ ಸಿಂಗ್ ಅವರ ಭೇಟಿಯು ಮಹತ್ವದೆನಿಸಿದ್ದು, ಮೆಗಾ ಯೋಜನೆಯ ಸಹಭಾಗಿತ್ವದಲ್ಲಿ ಭಾರತದಲ್ಲಿ ಯುದ್ಧ ವಿಮಾನ ಎಂಜಿನ್ ಅಭಿವೃದ್ಧಿಪಡಿಸಲು ಸಫ್ರಾನ್ ಎದುರು ನೋಡುತ್ತಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT