ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Russia Ukraine Conflict: ಉಕ್ರೇನ್‌ನ ಅವ್‌ಡಿವ್ಕಾ ನಗರ ರಷ್ಯಾ ವಶಕ್ಕೆ

Published 19 ಫೆಬ್ರುವರಿ 2024, 15:25 IST
Last Updated 19 ಫೆಬ್ರುವರಿ 2024, 15:25 IST
ಅಕ್ಷರ ಗಾತ್ರ

ಕೀವ್‌: ಉಕ್ರೇನ್‌ನ ಅವ್‌ಡಿವ್ಕಾ ನಗರವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ರಷ್ಯಾ ಸೇನೆ ಸೋಮವಾರ ತಿಳಿಸಿದೆ.

ಅವ್‌ಡಿವ್ಕಾದಲ್ಲಿ ರಷ್ಯಾ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದು, ಉಕ್ರೇನ್‌ ಪಡೆಗಳನ್ನು ನಗರದಿಂದ ಹೊರದಬ್ಬಿದೆ.

‘ಅವ್‌ಡಿವ್ಕಾ ನಮ್ಮ ನಿಯಂತ್ರಣದಲ್ಲಿದೆ’ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ. ರಷ್ಯಾ ಬಾಂಬ್‌ ದಾಳಿಯ ಬಳಿಕ ನಗರದಿಂದ ಹೊರಬಂದಿರುವುದಾಗಿ ಉಕ್ರೇನ್‌ ಸೇನೆ ತಿಳಿಸಿದೆ.

ಯುದ್ಧ ಆರಂಭವಾಗಿ ಎರಡು ವರ್ಷ ಪೂರ್ಣಗೊಳ್ಳಲು ಕೆಲವೇ ದಿನಗಳಿಗಿರುವಾಗ ಲಭಿಸಿರುವ ದೊಡ್ಡ ಯಶಸ್ಸು ರಷ್ಯಾಕ್ಕೆ ಮತ್ತಷ್ಟು ಶಕ್ತಿ ತುಂಬಿದೆ ಎಂದು ವಿಶ್ಲೇಷಿಸಲಾಗಿದೆ. 

‘ರಷ್ಯಾಕ್ಕೆ ಪ್ರತ್ಯುತ್ತರ ನೀಡುವ ಸಲುವಾಗಿ ಉಕ್ರೇನ್, ಅವ್‌ಡಿವ್ಕಾ ಸುತ್ತಮುತ್ತ ಬೃಹತ್ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸುವ ಸಾಧ್ಯತೆಗಳಿವೆ’ ಎಂದು ಕೆಲ ಪಾಶ್ಚಿಮಾತ್ಯ ಮಿಲಿಟರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT