ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live: ರಷ್ಯಾ–ಉಕ್ರೇನ್ ಸಂಘರ್ಷ| ವಿನ್ನಿಟ್ಸಿಯಾ ವಿಮಾನ ನಿಲ್ದಾಣವನ್ನು ಧ್ವಂಸಗೊಳಿಸಿದ ರಷ್ಯಾ ಸೇನಾ ಪಡೆಗಳು
LIVE

ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ನಡೆಸುತ್ತಿದ್ದಾರೆ. ಪುಟಿನ್ ನಡೆಯನ್ನು ವಿಶ್ವ ಸಮುದಾಯ ತೀವ್ರವಾಗಿ ಖಂಡಿಸಿದೆ. ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿವೆ. ರಷ್ಯಾ–ಉಕ್ರೇನ್ ಸಂಘರ್ಷದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
Last Updated 6 ಮಾರ್ಚ್ 2022, 13:34 IST
ಅಕ್ಷರ ಗಾತ್ರ
13:3306 Mar 2022

ಉಕ್ರೇನ್‌ನ ವಿನ್ನಿಟ್ಸಿಯಾ ವಿಮಾನ ನಿಲ್ದಾಣ ಧ್ವಂಸ

ರಷ್ಯಾ ನಡೆಸಿದ ಬಾಂಬ್‌ ದಾಳಿಯಿಂದಾಗಿ ಉಕ್ರೇನ್‌ನ ವಿನ್ನಿಟ್ಸಿಯಾ ವಿಮಾನ ನಿಲ್ದಾಣ ಧ್ವಂಸಗೊಂಡಿದೆ ಎಂದು ಅಧ್ಯಕ್ಷ ವೊಲೊಡಿಮಿರ್‌ ಝೆಲನ್‌ಸ್ಕಿ ಹೇಳಿದ್ದಾರೆ. 

11:2206 Mar 2022

ಒಡೆಸ್ಸಾ ಮೇಲೆ ಶೆಲ್‌ ದಾಳಿ ನಡೆಸಲಿದೆ ರಷ್ಯಾ: ಝೆಲೆನ್‌ಸ್ಕಿ

ಬಂದರು ನಗರ ಒಡೆಸ್ಸಾ ಮೇಲೆ ರಷ್ಯಾ ಶೆಲ್ ದಾಳಿ ನಡೆಸಲು ಯೋಜನೆ ರೂಪಿಸುತ್ತಿದೆ ಎಂದು  ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲನ್‌ಸ್ಕಿ ಭಾನುವಾರ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. 

‘ರಷ್ಯನ್ನರು ಯಾವಾಗಲೂ ಒಡೆಸ್ಸಾಕ್ಕೆ ಬರುತ್ತಿರುತ್ತಾರೆ. ಒಡೆಸ್ಸಾದ ಬೆಚ್ಚಿಗಿನ ವಾತಾವರಣವನ್ನು ಅನುಭವಿಸುತ್ತಾರೆ.  ಇಲ್ಲಿ ನಿಷ್ಠೆ ಕಾಣುತ್ತಾರೆ.  ಆದರೀಗ? ಒಡೆಸ್ಸಾ ಮೇಲೆ ಬಾಂಬ್‌ ಹಾಲು ನಿಂತಿದ್ದಾರೆ. ಪಿರಂಗಿ ಹಿಡಿದು ಬಂದಿದ್ಡಾರೆ, ಒಡೆಸ್ಸಾ ವಿರುದ್ಧ ಕ್ಷಿಪಣಿಗಳನ್ನು ಹಾಕಲಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

11:0506 Mar 2022

ರಷ್ಯಾದ 11,000 ಕ್ಕೂ ಅಧಿಕ ಸೈನಿಕರ ಹತ್ಯೆ: ಉಕ್ರೇನ್ ಮಾಹಿತಿ

ಫೆಬ್ರುವರಿ 25ರಿಂದ ಇಲ್ಲಿಯವರೆಗೂ 11,000 ಕ್ಕೂ ಹೆಚ್ಚು ರಷ್ಯಾ ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್‌ ಸರ್ಕಾರ ಹೇಳಿಕೊಂಡಿದೆ. ಈ ಕುರಿತು ಸುದ್ದಿಸಂಸ್ಥೆ ‘ರಾಯಿಟರ್ಸ್‌’ ವರದಿ ಮಾಡಿದೆ.

10:0006 Mar 2022

ರಷ್ಯಾ ವಿರುದ್ಧ ಬ್ರಿಟನ್ ಆರೋಪ

ಯುದ್ಧಪೀಡಿತ ಉಕ್ರೇನ್‌ನಲ್ಲಿ ಜನನಿಬಿಡ ಪ್ರದೇಶವನ್ನು ರಷ್ಯಾ ಗುರಿಯಾಗಿಸುತ್ತಿದೆ ಎಂದು ಬ್ರಿಟನ್ ಮಿಲಿಟರಿ ಗುಪ್ತಚರ ಇಲಾಖೆ ಭಾನುವಾರ ಹೇಳಿಕೆ ನೀಡಿದೆ.

ಸಂಪೂರ್ಣ ಸುದ್ದಿ ಓದಿ
 

15:4805 Mar 2022

ಮಾಸ್ಕೋದ ಪಡೆಗಳು ಕದನ ವಿರಾಮವನ್ನು ಮುರಿದಿದ್ದು, ನಾಗರಿಕ ಸ್ಥಳಾಂತರ ಕಾರ್ಯ ವಿಳಂಬವಾಗುತ್ತಿದೆ ಎಂದು ಉಕ್ರೇನ್‌ನ ಬಂದರು ನಗರವಾದ ಮಾರಿಯುಪೋಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.

14:1005 Mar 2022

ಸುಮಿ ನಗರದಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ತೀವ್ರ ಕಾಳಜಿ ಹೊಂದಿದ್ದೇವೆ: ಅರಿಂದಮ್ ಬಾಗ್ಚಿ 

ನವದೆಹಲಿ: ಪೂರ್ವ ಉಕ್ರೇನ್‌ನ ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ, ರಷ್ಯಾ ಮತ್ತು ಉಕ್ರೇನ್‌ ದೇಶಗಳೆರಡು ಸಂಘರ್ಷದ ಪ್ರದೇಶದಿಂದ ಸುರಕ್ಷಿತವಾಗಿ ಹಿಂತಿರುಗಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಬಲವಾಗಿ ಒತ್ತಾಯಿಸಿದೆ. 

'ವಿದ್ಯಾರ್ಥಿಗಳು ಸುರಕ್ಷತೆಯಿಂದಿರಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಅನಗತ್ಯ ಅಪಾಯಗಳನ್ನು ತಪ್ಪಿಸಲು ಶೆಲ್ಟರ್‌ಗಳಲ್ಲಿಯೇ ಉಳಿಯಬೇಕು ಎಂದು ಸಲಹೆ ನೀಡಲಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. 

ಸುಮಾರು 700 ಭಾರತೀಯರು ಸುಮಿ ನಗರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರು ಶುಕ್ರವಾರ ತಿಳಿಸಿದ್ದರು. 

'ಉಕ್ರೇನ್‌ನ ಸುಮಿ ನಗರದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ನಾವು ತೀವ್ರ ಕಾಳಜಿ ಹೊಂದಿದ್ದೇವೆ. ನಮ್ಮ ವಿದ್ಯಾರ್ಥಿಗಳಿಗೆ ಸುರಕ್ಷಿತ ಕಾರಿಡಾರ್ ನಿರ್ಮಿಸಲು ರಷ್ಯಾ ಮತ್ತು ಉಕ್ರೇನ್ ಸರ್ಕಾರಗಳನ್ನು ಬಲವಾಗಿ ಒತ್ತಾಯಿಸಿದ್ದೇವೆ' ಎಂದು ಬಾಗ್ಚಿ ಶನಿವಾರ ಟ್ವೀಟ್‌ ಮಾಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ ರಾಯಭಾರ ಕಚೇರಿ ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

09:5905 Mar 2022

ಧೈರ್ಯವಾಗಿರಿ: ಉಕ್ರೇನ್‌ನ ಸುಮಿಯಲ್ಲಿ ಸಿಲುಕಿರುವ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ

ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ಶನಿವಾರ ಭಾಗಶಃ ಯುದ್ಧ ವಿರಾಮ ಘೋಷಿಸಿದ್ದು, ಮರಿಯುಪೋಲ್ ಮತ್ತು ವೊಲ್ನೊವಾಕಾ ನಗರಗಳಿಂದ ಮಾನವೀಯ ಕಾರಿಡಾರ ಮೂಲಕ ವಿದೇಶಿಯರು ಹೊರಹೋಗಲು ಅನುವು ಮಾಡಿಕೊಡಲಾಗಿದೆ.

ಈ ಮಧ್ಯೆ, ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ದೈರ್ಯದಿಂದಿರುವಂತೆ ಭಾರತದ ರಾಯಭಾರ ಕಚೇರಿ ಸಲಹೆ ನೀಡಿದೆ.
 
ಈ ಮಧ್ಯೆ, ಯುದ್ಧ ವಿರಾಮವು ಭಾರತೀಯರು ಗಡಿ ತಲುಪಲು ನೆರವಾಗುತ್ತದೆ ಎಂದು ಹಾರ್ಕಿವ್‌ನಿಂದ ಬಂದ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

ಹಲವು ವಿದ್ಯಾರ್ಥಿಗಳು ಈಗಲೂ ಸುಮಿಯಲ್ಲಿ ಸಿಲುಕಿದ್ದು, ಅನ್ನ, ನೀರಿಲ್ಲದೆ ಪರತಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
 
 

08:3105 Mar 2022

ನಗರದಿಂದ ಹೊರ ಹೋಗಲು 5 ಗಂಟೆ ಅವಕಾಶ

ಉಕ್ರೇನಿಯನ್ ನಗರವಾದ ಮಾರಿಯುಪೋಲ್‌ನಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದೆ.  ಐದು ಗಂಟೆಗಳ ಅವಧಿಯಲ್ಲಿ ನಾಗರಿಕರಿಗೆ ನಗರವನ್ನು ತೊರೆಯಲು ಅನುವು ಮಾಡಿಕೊಡಲಾಗಿದೆ. 

07:0805 Mar 2022

ಮಾರಿಯುಪೋಲ್‌ ಮತ್ತು ವೋಲ್ನೋವಾಖಾ ಪ್ರದೇಶದಲ್ಲಿ ರಷ್ಯಾ ಸೇನೆಯಿಂದ ಕದನ ವಿರಾಮ

ಉಕ್ರೇನ್‌ನ ಮಾರಿಯುಪೋಲ್‌ ಮತ್ತು ವೋಲ್ನೋವಾಖಾ ಪ್ರದೇಶದಲ್ಲಿ ರಷ್ಯಾ ಸೇನೆ ಇಂದು ಬೆಳಗ್ಗೆ ಕದನ ವಿರಾಮ ಘೋಷಿಸಿದೆ. ಈ ಮೂಲಕ ಮಾನವೀಯ ಪರಿಹಾರ ಕಾರ್ಯ ಕೈಗೊಳ್ಳಲು ಮತ್ತು ನಾಗರಿಕರು ನಗರದಿಂದ ಹೊರ ಹೋಗಲು ಸೇನೆ ಅವಕಾಶ ಮಾಡಿಕೊಟ್ಟಿದೆ. 

ಆದರೆ, ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದೂ ರಷ್ಯಾದ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ. 

ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಮಾರಿಯುಪೋಲ್‌ ಮತ್ತು ವೋಲ್‌ನೊವೋಖಾ ಪ್ರದೇಶದಲ್ಲಿ ಕದನ ವಿರಾಮ ಘೋಷಣೆ ಮಾಡಲಾಯಿತು. ಪರಿಹಾರ ಕಾರ್ಯ ಕೈಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ನಾಗರಿಕರು ಈ ನಗರಗಳನ್ನು ತೊರೆಯಲು ಅವಕಾಶ ನೀಡಲಾಗಿದೆ ಎಂದು ರಷ್ಯಾ ಸೇನೆ ತಿಳಿಸಿದೆ. 

ವ್ಯೂಹಾತ್ಮಕವಾಗಿ ಪ್ರಾಮುಖ್ಯತೆ ಪಡೆದಿರುವ  ಮಾರಿಯುಪೋಲ್‌ ಮೇಲೆ ರಷ್ಯಾ ಕೆಲವು ದಿನಗಳಿಂದ ನಿರಂತರ ದಾಳಿ ಕೈಗೊಂಡಿತ್ತು. ನಗರಕ್ಕೆ ನೀರು, ವಿದ್ಯುತ್‌ ಕಡಿತಗೊಂಡು, ಜನ ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ, ಮಾನವೀಯ ಪರಿಹಾರ ಕಾರ್ಯ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಮಾರಿಯುಪೋಲ್‌ ಮೇಯರ್‌ ಆಗ್ರಹಿಸಿದ್ದರು. 

05:4805 Mar 2022

ಅಣಸ್ಥಾವರದ ಮೇಲಿನ ದಾಳಿ ಯುದ್ಧಾಪರಾಧ

ಉಕ್ರೇನ್‌ನ ಝಪೊರೀಝ್ಯಾ ಅಣ ವಿದ್ಯುತ್‌ ಸ್ಥಾವರದ ಮೇಲಿನ ರಷ್ಯಾದ ದಾಳಿಯನ್ನು ಯುದ್ಧಾಪರಾದವೆಂದು ಪರಿಗಣಿಸುವಂತೆ ಉಕ್ರೇನ್‌ ಒತ್ತಾಯಿಸಿದೆ. 

ಶುಕ್ರವಾರ ಬೆಳಗ್ಗೆ ಝಪೊರೀಝ್ಯಾ ಅಣುಸ್ಥಾವರದ ಮೇಲೆ ರಷ್ಯಾ ಶೆಲ್‌ ದಾಳಿ ನಡೆಸಿತ್ತು. ಇಡೀ ವಿಶ್ವದಲ್ಲಿ ಆತಂಕ ವ್ಯಕ್ತವಾದ ನಂತರ ದಾಳಿಯನ್ನು ನಿಲ್ಲಿಸಲಾಗಿತ್ತು.