ರಷ್ಯಾ ಯುದ್ಧವನ್ನು ಹೊಸ ವರ್ಷಕ್ಕೆ ಕೊಂಡೊಯ್ಯುತ್ತಿದೆ. ಉದ್ದೇಶಪೂರ್ವಕವಾಗಿ ರಾಜತಾಂತ್ರಿಕ ಪ್ರಯತ್ನಗಳನ್ನು ಹಾಳು ಮಾಡುತ್ತಿದೆ. ಬುಧವಾರವೂ 200ಕ್ಕೂ ಹೆಚ್ಚು ಡ್ರೋನ್ ಮೂಲಕ ದಾಳಿ ನಡೆಸಿದೆ –
ವೊಲೊಡಿಮಿರ್ ಝೆಲೆನ್‌ಸ್ಕಿ ಉಕ್ರೇನ್ ಅಧ್ಯಕ್ಷ
ಅಧ್ಯಕ್ಷರ ನಿವಾಸ ಸೇರಿ ರಷ್ಯಾವನ್ನು ಗುರಿಯಾಗಿಸಿ ಉಕ್ರೇನ್ ನಡೆಸಿದ ದಾಳಿಯಲ್ಲಿ ಹೊಡೆದುರುಳಿಸಿದ ಡ್ರೋನ್‌ಗಳ ಡೀಕ್ರಿಪ್ಟ್ ಮಾಡಿದ ಡೇಟಾವನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗುವುದು
– ರಷ್ಯಾ ರಕ್ಷಣಾ ಸಚಿವಾಲಯ
‘ಉಕ್ರೇನ್ ನೇರ ಕಾರಣ’
ಹೊಸ ವರ್ಷದ ಸಂಭ್ರಮಾಚರಣೆ ಮೇಲೆ ನಡೆದ ಡ್ರೋನ್ ದಾಳಿಗೆ ಉಕ್ರೇನ್ ನೇರ ಕಾರಣ ಎಂದು ರಷ್ಯಾ ಆರೋಪಿಸಿದೆ. ಆದರೆ ಉಕ್ರೇನ್ ಇದುವರೆಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ‘ರಷ್ಯಾದ ಜನರ ಮೇಲೆ ಉಕ್ರೇನ್ ಭಯೋತ್ಪಾದಕ ದಾಳಿ ನಡೆಸಿದೆ’ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ವಕ್ತಾರೆ ಮಾರಿಯಾ ಜಖರೊವಾ ಹೇಳಿದ್ದಾರೆ. ರಷ್ಯಾ–ಉಕ್ರೇನ್ ನಡುವೆ ನಾಲ್ಕು ವರ್ಷಗಳಿಂದ ಮುಂದುವರಿದಿರುವ ಯುದ್ಧವನ್ನು ರಾಜತಾಂತ್ರಿಕತೆ ಮೂಲಕ ಕೊನೆಗಾಣಿಸುವ ಪ್ರಯತ್ನ ನಡೆದಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ‘ರಷ್ಯಾ ಡ್ರೋನ್ ದಾಳಿ ಮುಂದುವರಿಸಿರುವುದರಿಂದ ನಾವು ಶಾಂತಿ ಒಪ್ಪಂದದಿಂದ ಶೇ 10ರಷ್ಟು ಹಿಂದೆ ಸರಿದಿದ್ದೇವೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಇತ್ತೀಚೆಗೆ ಹೇಳಿದ್ದರು.