ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ರಷ್ಯಾ ವಿಮಾನ ಪತನ

Published 21 ಜನವರಿ 2024, 12:39 IST
Last Updated 21 ಜನವರಿ 2024, 12:39 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾದ ವಿಮಾನವೊಂದು ಅಫ್ಗಾನಿಸ್ತಾನದ ಈಶಾನ್ಯ ಭಾಗದ ಪರ್ವತ ಪ್ರದೇಶದಲ್ಲಿ ಪತನಗೊಂಡಿದ್ದು, ಘಟನೆ ವೇಳೆ ವಿಮಾನದಲ್ಲಿ ಆರು ಮಂದಿ ಇದ್ದರು ಎಂದು ಇಲ್ಲಿನ ವಿಮಾನಯಾನ ಸಂಸ್ಥೆ ರೊಸವಿಯತ್‌ಸಿಯಾ ಭಾನುವಾರ ಘೋಷಿಸಿದೆ.

ಫಾಲ್ಕನ್‌–10 ವಿಮಾನವು ಶನಿವಾರ ಸಂಜೆಯಿಂದಲೇ ಸಂಪರ್ಕ ಕಳೆದುಕೊಂಡಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ವಿಮಾನದಲ್ಲಿ ನಾಲ್ವರು ಸಿಬ್ಬಂದಿ ಮತ್ತು ಇಬ್ಬರು ಪ್ರಯಾಣಿಕರಿದ್ದರು ಎಂದು ತಿಳಿಸಿದೆ.

ಎರಡು ಎಂಜಿನ್‌ನ ವಾಣಿಜ್ಯ ಜೆಟ್‌ ವಿಮಾನವನ್ನು ಫ್ರಾನ್ಸ್‌ನ ಡಾಸೊ ಸಂಸ್ಥೆಯು 1978ರಲ್ಲಿ ನಿರ್ಮಿಸಿತ್ತು. ವಿಮಾನವು ಭಾರತದಿಂದ ಉಜ್ಬೇಕಿಸ್ತಾನ ಮತ್ತು ರಷ್ಯಾಗೆ ಹೊರಟಿತ್ತು.

‘ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರು ರಷ್ಯಾ ಮೂಲದ ದಂಪತಿ. ಪತ್ನಿ ಅನಾರೋಗ್ಯಕ್ಕೀಡಾಗಿದ್ದರು’ ಎಂದು ರಿಯಾ ನೊವೊಸ್ತಿ ಸುದ್ದಿ ಸಂಸ್ಥೆ ತಿಳಿಸಿದೆ.

‘ವಿಮಾನವು ಬದಕ್ಷನ್ ಪ್ರಾಂತ್ಯದಲ್ಲಿ ಪತನಗೊಂಡಿದೆ. ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ರವಾನಿಸಲಾಗಿದೆ’ ಎಂದು ಅಫ್ಗಾನಿಸ್ತಾನದ ಪ್ರಾಂತ್ಯವೊಂದರ ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.

ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ರಷ್ಯಾ ತಿಳಿಸಿದೆ.

ವಿಮಾನ ಭಾರತದ್ದಲ್ಲ: ಕೇಂದ್ರದಿಂದ ಸ್ಪಷ್ಟನೆ

ನವದೆಹಲಿ: ಅಫ್ಗಾನಿಸ್ತಾನದಲ್ಲಿ ಪತನಗೊಂಡಿರುವ ಸಣ್ಣ ವಿಮಾನವು ಭಾರತದ್ದಲ್ಲ. ಥಾಯ್ಲೆಂಡ್‌ನಿಂದ ಮಾಸ್ಕೊಗೆ ಹೊರಟಿದ್ದ ವಿಮಾನಕ್ಕೆ ಗಯಾ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಲಾಗಿತ್ತು ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.

‘ಸದ್ಯದ ಮಾಹಿತಿ ಪ್ರಕಾರ ಪತನಗೊಂಡ ವಿಮಾನವು ಮೊರೊಕ್ಕೊದಲ್ಲಿ ನೋಂದಣಿಯಾಗಿದೆ. ಇದು ಭಾರತದ ಯಾವುದೇ ವಿಮಾನಯಾನ ಸಂಸ್ಥೆಗಳಿಗೆ ಸೇರಿದ್ದಲ್ಲ’ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ.

ವರದಿಗಳ ಪ್ರಕಾರ ವಿಮಾನವು, ಗಯಾ, ಭಾರತ, ತಾಷ್ಕೆಂಟ್‌, ಉಜ್ಬೇಕಿಸ್ತಾನ ಮೂಲಕವಾಗಿ ಮಾಸ್ಕೊಗೆ ತೆರಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT