ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ್ಗಳ್ಳರು ಅಪಹರಿಸಿದ್ದ ಹಡಗಿನಲ್ಲಿದ್ದ ಶ್ರೀಲಂಕಾದ ಮೀನುಗಾರರ ರಕ್ಷಣೆ

Published 29 ಜನವರಿ 2024, 15:45 IST
Last Updated 29 ಜನವರಿ 2024, 15:45 IST
ಅಕ್ಷರ ಗಾತ್ರ

ಕೊಲಂಬೊ: ಸೊಮಾಲಿಯಾ ಕಡಲ್ಗಳ್ಳರು ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದ್ದ ಶ್ರೀಲಂಕಾದ ಮೀನುಗಾರಿಕಾ ಹಡಗಿನಲ್ಲಿದ್ದ ಆರು ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು  ಆನ್‌ಲೈನ್‌ ಮಾಧ್ಯಮ ‘ನ್ಯೂಸ್‌ಫಸ್ಟ್‌.ಎಲ್‌ಕೆ’ ಸೋಮವಾರ ವರದಿ ಮಾಡಿದೆ.

ಶ್ರೀಲಂಕಾದ ನೌಕಾಪಡೆಯ ಮನವಿಗೆ ಸ್ಪಂದಿಸಿ ಸಿಷೆಲ್ಸ್‌ ದೇಶದ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಮೀನುಗಾರರನ್ನು ರಕ್ಷಿಸಿವೆ. ಮೂವರು ಕಡಲ್ಗಳ್ಳರು ಶರಣಾಗಿದ್ದಾರೆ ಎಂದೂ ಹೇಳಿದೆ.

‘ಲೊರೆನ್ಜೊ ಪುತಾ 4’ ಹಡಗಿನಲ್ಲಿದ್ದ ಮೀನುಗಾರರನ್ನು ಸಿಷೆಲ್ಸ್‌ನ ರಾಜಧಾನಿಗೆ ಕರೆದೊಯ್ಯಲಾಗಿದೆ ಎಂದೂ ವರದಿಯಲ್ಲಿ ವಿವರಿಸಿದೆ.

ಮೀನುಗಾರಿಕಾ ಹಡಗನ್ನು ಸೊಮಾಲಿಯಾದ ಕಡಲ್ಗಳ್ಳರು ಅಪಹರಿಸಿರುವ ಸಾಧ್ಯತೆ ಇದ್ದು, ಅವರ ಪತ್ತೆಗಾಗಿ ಆಫ್ರಿಕಾ ಪ್ರದೇಶದಲ್ಲಿರುವ ಶ್ರೀಲಂಕಾದ ರಾಯಭಾರಿ ಸೊಮಾಲಿಯಾದ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ಶ್ರೀಲಂಕಾ ನೌಕಾಪಡೆಯ ವಕ್ತಾರ ಕ್ಯಾಪ್ಟನ್‌ ಗಯನ್‌ ವಿಕ್ರಮಸಿಂಘೆ ಹೇಳಿದ್ದರು.

ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ರಕ್ಷಣೆಗಾಗಿ ಅಮೆರಿಕ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗೆ ಕೈಜೋಡಿಸುವುದಾಗಿ ಶ್ರೀಲಂಕಾ ಘೋಷಿಸಿದ ಎರಡು ವಾರಗಳ ಬಳಿಕ ಈ ಹಡಗನ್ನು ಅಪಹರಿಸಲಾಗಿದೆ. ಯೆಮನ್‌ನ ಹುತಿ ಬಂಡುಕೋರರು ಕೂಡ ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡುಗಳ ಮೇಲೆ ಪದೇ ಪದೇ ದಾಳಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT