ಮನಿಲಾ (ಫಿಲಿಪ್ಪೀನ್ಸ್): ಉತ್ತರ ಫಿಲಿಪ್ಪೀನ್ಸ್ನಲ್ಲಿ ಬುಧವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ ಇಬ್ಬರು ಸಾವಿಗೀಡಾಗಿದ್ದು, 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಭೂಕಂಪದಿಂದಾಗಿ ಭೂಕುಸಿತ, ಕಟ್ಟಡಗಳು ಮತ್ತು ಚರ್ಚ್ಗಳಲ್ಲಿ ಹಾನಿ ಸಂಭವಿಸಿದೆ. ಭಯಭೀತರಾದ ಜನ ಮನೆಯಿಂದ ಮತ್ತು ಆಸ್ಪತ್ರೆಯಿಂದ ರೋಗಿಗಳು ಹೊರಗೆ ಓಡಿ ಬಂದಿದ್ದಾರೆ.

ರಿಕ್ಷರ್ ಮಾಪಕದಲ್ಲಿ 7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅಬ್ರಾ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಫಿಲಿಪ್ಪೀನ್ಸ್ನ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಕೇಂದ್ರದ ಮುಖ್ಯಸ್ಥ ರೆನಾಟೊ ಸೊಲಿಡಮ್ ಹೇಳಿದ್ದಾರೆ.

‘ಇದ್ದಕ್ಕಿದ್ದಂತೆ ನೆಲ ನಡುಗಿತು ಮತ್ತು ದೀಪಗಳು ಆರಿಹೋದವು. ನಾವು ಕಚೇರಿಯಿಂದ ಹೊರಗೆ ಓಡಿ ಬಂದೆವು, ಅಕ್ಕಪಕ್ಕದಲ್ಲಿ ಕಿರುಚಾಟ ಕೇಳುತ್ತಿತ್ತು. ನನ್ನ ಕೆಲವು ಸಹಚರರು ಕಣ್ಣೀರು ಹಾಕುತ್ತಿದ್ದರು’ ಎಂದು ಭೂಕಂಪ ಕೇಂದ್ರ ಬಿಂದುವಿನ ಸಮೀಪ ವಾಸವಿರುವ ಲಗಾಂಗಿಲಾಂಗ್ನ ಅಬ್ರಾ ಪಟ್ಟಣದ ಸುರಕ್ಷತಾ ಅಧಿಕಾರಿ ಮೈಕೆಲ್ ಬ್ರಿಲಾಂಟೆಸ್ ಹೇಳಿದರು.

‘ಅದು ನನ್ನ ಅನುಭವಕ್ಕೆ ಬಂದ ಅತ್ಯಂತ ಶಕ್ತಿಯುತವಾದ ಭೂಕಂಪವಾಗಿದೆ ಮತ್ತು ಭೂಮಿತೆರೆದುಕೊಳ್ಳುಬಹುದೇನೊ ಎಂದು ಭಾವಿಸಿದ್ದೆ’ಎಂದು ಬ್ರಿಲಾಂಟೆಸ್ ತಿಳಿಸಿದರು.

ಅಬ್ರಾದಲ್ಲಿನ ತಮ್ಮ ಮನೆಯಲ್ಲಿ ಸಿಮೆಂಟ್ ಸ್ಲ್ಯಾಬ್ ಬಿದ್ದ ಪರಿಣಾಮ ಗ್ರಾಮಸ್ಥರೊಬ್ಬರು ಸಾವಿಗೀಡಾಗಿದ್ದಾರೆ. ಅಲ್ಲಿ ಕನಿಷ್ಠ 25 ಮಂದಿ ಗಾಯಗೊಂಡಿದ್ದಾರೆ.

ಬೆಂಗುಟ್ ಪ್ರಾಂತ್ಯದ ಲಾ ಟ್ರಿನಿಡಾಡ್ ಪಟ್ಟಣದಲ್ಲಿ ಕಟ್ಟಡ ಕಾರ್ಮಿಕರೊಬ್ಬರು ಅವಶೇಷಗಳು ಬಿದ್ದು ಸಾವಿಗೀಡಾಗಿದ್ದಾರೆ. ಅಲ್ಲಿ ಕೆಲವು ರಸ್ತೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಬಂಡೆಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.