ಪೋರ್ಟ್ ಸುಡಾನ್ (ಸುಡಾನ್): ಸುಡಾನ್ನ ಉತ್ತರ ದಾರ್ಫುರ್ ರಾಜ್ಯದ ಅಲ್ ಫಾಶಿರ್ ನಗರದ ನಿರಾಶ್ರಿತರ ಶಿಬಿರದ ಮೇಲೆ ಸುಡಾನ್ನ ಅರೆಸೇನಾ ಪಡೆ ನಡೆಸಿದ ಡ್ರೋನ್ ಹಾಗೂ ಶೆಲ್ ದಾಳಿಯಲ್ಲಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ.

ಅಲ್ ಫಾಶಿರ್ನ ವಿಶ್ವವಿದ್ಯಾಲಯದ ಮೈದಾನದಲ್ಲಿ ನಿರ್ಮಿಸಿರುವ ಶಿಬಿರದ ಮೇಲೆ ದಾಳಿ ನಡೆದಿದೆ ಎಂದು ಇಲ್ಲಿನ ‘ದಿ ರೆಸಿಸ್ಟೆಂಟ್ ಕಮಿಟಿ’ ಶನಿವಾರ ತಿಳಿಸಿದೆ. ‘ಮೃತರಲ್ಲಿ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಸೇರಿದ್ದಾರೆ. ಇಲ್ಲಿನ ಪರಿಸ್ಥಿತಿ ಭಯಾನಕವಾಗಿದೆ. ನಗರದೊಳಗೆ ನರಮೇಧ ನಡೆದಿದೆ’ ಎಂದು ಹೇಳಿದೆ.

ಸುಡಾನ್ನ ಅರೆಸೇನಾ ಪಡೆ ಮತ್ತು ಅಲ್ಲಿನ ಸೇನೆಯ ಮಧ್ಯೆ 2023ರ ಏಪ್ರಿಲ್ನಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಸಾವಿರಾರು ನಾಗರಿಕರು ಮೃತಪಟ್ಟಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.