ಕೈರೊ: ಸಿರಿಯಾದ ಮೂರನೇ ಅತಿದೊಡ್ಡ ನಗರವಾದ ಹೋಮ್ಸ್ ಅನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಬಂಡುಕೋರರ ಗುಂಪು ಭಾನುವಾರ ಘೋಷಿಸಿದೆ.

ಕಳೆದ ನಾಲ್ಕು ದಿನಗಳಿಂದ ಸಿರಿಯಾದಲ್ಲಿ ‘ಹಯಾತ್ ತಹ್ರೀರ್ ಅಲ್-ಶಾಮ್’ ಬಂಡುಕೋರರ ಗುಂಪು ಮತ್ತು ಬಶರ್ ಅಲ್–ಅಸ್ಸಾದ್ ನೇತೃತ್ವದ ಸರ್ಕಾರದ ನಡುವೆ ಸಂಘರ್ಷ ತೀವ್ರಗೊಂಡಿದ್ದು, ಪ್ರಮುಖ ನಗರಗಳಾದ ಅಲೆಪ್ಪೊ, ಹಮಾ ಮತ್ತು ದಾರಾವನ್ನು ಬಂಡುಕೋರರ ಗುಂಪು ತನ್ನ ವಶಕ್ಕೆ ಪಡೆದುಕೊಂಡಿದೆ.

ಶನಿವಾರ ರಾಜಧಾನಿ ಡಮಾಸ್ಕಸ್ ಸಮೀಪಿಸಿದ ಬಂಡುಕೋರರು, ಭಾನುವಾರ ಮುಂಜಾನೆ ಹೋಮ್ಸ್ ನಗರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.

‘ಹೋಮ್ಸ್ ನಗರದ ಮೇಲಿನ ತನ್ನ ನಿಯಂತ್ರಣವು ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸವನ್ನು ಗುರುತಿಸುವ ಐತಿಹಾಸಿಕ ಗೆಲುವಾಗಿದೆ’ ಎಂದು ಬಂಡುಕೋರರ ನಾಯಕ ಅಹ್ಮದ್ ಅಲ್-ಶರಾ ಹೇಳಿದರು.

ಇರಾನ್ ಮತ್ತು ರಷ್ಯಾದ ಬೆಂಬಲದಿಂದ ಕಳೆದ ಐದು ದಶಕಗಳಿಂದ ಸಿರಿಯಾದ ನಿಯಂತ್ರಣ ಪಡೆದಿದ್ದ ಬಶರ್ ಸರ್ಕಾರಕ್ಕೆ ಇದೀಗ ಅಧಿಕಾರ ಕಳೆದುಕೊಳ್ಳುವ ಭೀತಿ ಉಂಟಾಗಿದೆ. ಉಕ್ರೇನ್ ವಿರುದ್ಧ ರಷ್ಯಾ ಮತ್ತು ಇಸ್ರೇಲ್ ವಿರುದ್ಧ ಇರಾನ್ ಸಮರ ಸಾರಿರುವುದರಿಂದ ಸದ್ಯ ಸಿರಿಯಾದ ಬಿಕ್ಕಟ್ಟನ್ನು ನಿಯಂತ್ರಿಸುವುದು ಉಭಯ ರಾಷ್ಟ್ರಗಳಿಗೆ ಸವಾಲಾಗಿ ಪರಿಣಮಿಸಿದೆ.

2011ರಿಂದಲೇ ಸಿರಿಯಾದಲ್ಲಿ ಅಂತರ್ಯುದ್ಧ ಪ್ರಾರಂಭವಾಗಿದ್ದು, ಇತ್ತೀಚಿನ ದಿನಗಳಲ್ಲಿ ಯುದ್ಧ ತೀವ್ರಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.