ವಾಷಿಂಗ್ಟನ್ : ಭಾರತದೊಟ್ಟಿಗೆ ವ್ಯಾಪಾರ ಒಪ್ಪಂದ ಅಂತಿಮಗೊಳಿಸದ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವಾನ್ಸ್ ಹಾಗೂ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವಾರೊ ಅವರನ್ನು ಸೆನೆಟರ್ ಟೆಡ್ ಕ್ರೂಜ್ ಟೀಕಿಸಿದ್ದಾರೆಂದು ‘ಆಕ್ಸಿಯೋಸ್’ ಮಾಧ್ಯಮವು ವರದಿ ಮಾಡಿದೆ.

ದಾನಿಗಳೊಂದಿಗೆ ನಡೆದ ಖಾಸಗಿ ಸಭೆಯಲ್ಲಿ ಕ್ರೂಜ್ ಅವರು ಈ ರೀತಿ ಟೀಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಕ್ರೂಜ್ ಅವರ ಧ್ವನಿಯನ್ನು ಆಧರಿಸಿ ಮಾಧ್ಯಮವು ಈ ವರದಿ ಮಾಡಿದೆ. ಆ ಧ್ವನಿ ಅವರದ್ದೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ.

‘ಒಪ್ಪಂದಕ್ಕೆ ಅಡ್ಡಿಯಾಗುತ್ತಿರುವುದು ಯಾರು’ ಎಂದು ದಾನಿಗಳು ಪ್ರಶ್ನಿಸಿದಾಗ ಕ್ರೂಜ್ ಅವರು, ನವಾರೊ, ವ್ಯಾನ್ಸ್ ಮತ್ತು ಟ್ರಂಪ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.

ಟ್ರಂಪ್ ಸುಂಕ ನೀತಿಯು ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಬಹುದು ಮತ್ತು ಅವರ ವಾಗ್ದಂಡನೆಗೂ ಕಾರಣವಾಗಬಹುದು ಎಂದು ಕ್ರೂಜ್ ಎಚ್ಚರಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿದ ಬಳಿಕ ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ನನೆಗುದಿಗೆ ಬಿದ್ದಿದೆ. ಈ ಸಂಬಂಧ ಉಭಯ ದೇಶಗಳು ಹಲವು ಸುತ್ತಿನ ಮಾತುಕತೆ ನಡೆಸಿದರೂ ಯಾವುದೂ ಫಲಪ್ರದವಾಗಿಲ್ಲ.

‘ಭಾರತ–ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ’ ಎಂದು ಟ್ರಂಪ್ ಹೇಳಿಕೊಂಡ ಬಳಿಕ ಮತ್ತು ಅಮೆರಿಕವು ನೂತನ ವಲಸೆ ನೀತಿ ಜಾರಿಗೊಳಿಸಿದ ನಂತರ ಉಭಯ ದೇಶಗಳ ನಡುವಣ ಸಂಬಂಧದಲ್ಲಿ ಬಿರುಕು ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.