ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌ ಪ್ರಧಾನಿಯಾಗಿ ಪ್ರಯೂಥ್‌ ಅಧಿಕಾರ ಸ್ವೀಕಾರ

Last Updated 11 ಜೂನ್ 2019, 16:44 IST
ಅಕ್ಷರ ಗಾತ್ರ

ಬ್ಯಾಂಕಾಕ್:ಥಾಯ್ಲೆಂಡ್‌ನ ಪ್ರಧಾನಿಯಾಗಿ ಜುಂಟಾ (ಮಿಲಿಟರಿ) ನಾಯಕ ಜನರಲ್‌ ಪ್ರಯೂಥ್‌ ಚಾನ್‌–ಒಚಾ ಆಯ್ಕೆಯಾಗಿದ್ದಾರೆ.

ಪ್ರಯೂಥ್‌ ಅವರನ್ನು ಎರಡನೇ ಅವಧಿಗೆ ಪ್ರಧಾನಿಯಾಗಿ ಮುಂದುವರಿಸುವ ಸಂಬಂಧ ಸಂಸತ್‌ನಲ್ಲಿ ಕೈಗೊಂಡ ನಿರ್ಣಯವನ್ನು, ರಾಜ ದೃಢಪಡಿಸಿದರು. ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜನರಲ್‌ ಪ್ರಯೂಥ್‌, ರಾಜಾ ಮಹಾ ವಜಿರಲೊಂಗ್‌ಕಾರ್ನ್‌ ಅವರ ಭಾವಚಿತ್ರಕ್ಕೆ ಮಂಡಿಯೂರಿ ನಮಿಸಿ, ನಂತರ ಪ್ರಧಾನಿಯಾಗಿ ಪದಗ್ರಹಣ ಮಾಡಿದರು.

2014ರಲ್ಲಿ ಪ್ರಯೂಥ್‌ ನೇತೃತ್ವದಲ್ಲಿ ನಡೆದ ಸೇನಾ ದಂಗೆ ಪರಿಣಾಮ ಆಗಿನ ಚುನಾಯಿತ ಸರ್ಕಾರ ಪತನಗೊಂಡಿತು. ನಂತರ ಅಧಿಕಾರಕ್ಕೆ ಬಂದ ಪ್ರಯೂಥ್‌ ನೇತೃತ್ವದ ಸರ್ಕಾರ, ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತಂದಿತು. ಇದರ ಫಲವಾಗಿಯೇ ಪ್ರಯೂಥ್‌ ಎರಡನೇ ಅವಧಿಗೆ ಚುನಾವಣೆಯನ್ನು ಎದುರಿಸದೇ, ಕೇವಲ ಸಂಸತ್‌ನಲ್ಲಿ ನಡೆದ ಮತದಾನ ಪ್ರಕ್ರಿಯೆ ಮೂಲಕ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT