ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ನಟ ಡ್ಯಾನಿ ಮಾಸ್ಟರ್‌ಸನ್‌ಗೆ 30 ವರ್ಷ ಶಿಕ್ಷೆ

Published 1 ಜೂನ್ 2023, 14:56 IST
Last Updated 1 ಜೂನ್ 2023, 14:56 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್‌: ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಿರುತೆರೆಯ ‘ದಟ್‌ 70ರ ಶೋ’ ಖ್ಯಾತಿಯ ಅಮೆರಿಕದ ನಟ ಡ್ಯಾನಿ ಮಾಸ್ಟರ್‌ಸನ್‌ 30 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಇಲ್ಲಿನ ನ್ಯಾಯಾಲಯದಲ್ಲಿ ಬುಧವಾರ ನ್ಯಾಯಾಧೀಶರು ತೀರ್ಪು ಓದುವಾಗ ಮಾಸ್ಟರ್‌ಸನ್‌ ಅವರ ಪತ್ನಿ ಮಾಡೆಲ್ ಆದ ಬಿಜೌ ಫಿಲಿಪ್ಸ್ ಗದ್ಗದಿತರಾದರು. ಕೋರ್ಟ್‌ ಹಾಲ್‌ನಲ್ಲಿದ್ದ ನಟನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಕಳಾಹೀನರಾದರು. 

ಹನ್ನೆರಡು ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠವು 8–4 ಮತಗಳ ಆಧಾರದ ಮೇಲೆ ಶಿಕ್ಷೆ ಪ್ರಕಟಿಸಿತು. 

2001ರಿಂದ 2003ರ ಅವಧಿಯಲ್ಲಿ ಮಾಸ್ಟರ್‌ಸನ್‌ ತನ್ನ ನಿವಾಸದಲ್ಲಿ ಬಹುಕಾಲದ ಗೆಳತಿ ಹಾಗೂ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಇತ್ತು. ಅವರ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಇನ್ನೂ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT