ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠ್ಮಂಡು : ‘ಆದಿಪುರುಷ್’ ಚಿತ್ರ ಪ್ರದರ್ಶನಕ್ಕೆ ತಡೆ

Published 17 ಜೂನ್ 2023, 15:22 IST
Last Updated 17 ಜೂನ್ 2023, 15:22 IST
ಅಕ್ಷರ ಗಾತ್ರ

ಕಠ್ಮಂಡು; ರಾಮಾಯಣ ಆಧರಿಸಿದ ‘ಆದಿಪುರುಷ್‌’ ಚಿತ್ರದಲ್ಲಿ ಸೀತೆಯ ಜನ್ಮಸ್ಥಳ ಕುರಿತ ತಪ್ಪನ್ನು  ಸರಿಪಡಿಸುವಂತೆ ನಗರ ಮೇಯರ್‌ ಬಾಲೇಂದ್ರ ಶಾ ಅವರು ನಿರ್ಮಾಪಕರಿಗೆ ಸೂಚಿಸಿದ ಬ‌ಳಿಕ  ಕಠ್ಮಂಡುವಿನಾದದ್ಯಾಂತ ಚಿತ್ರಪ್ರದರ್ಶನ ತಡೆಹಿಡಿಯಲಾಗಿದೆ. 

ಆದಿಪುರುಷ್‌ನಲ್ಲಿರುವ ‘ಜಾನಕಿ ಭಾರತದ ಮಗಳು’ ಎಂಬ ಸಾಲುಗಳನ್ನು ನೇಪಾಳ ಮತ್ತು ಭಾರತದಲ್ಲಿ ತೆಗೆದುಹಾಕುವವರೆಗೂ, ಕಠ್ಮಂಡು ಮೆಟ್ರೋಪಾಲಿಟನ್ ನಗರದಲ್ಲಿ ಯಾವುದೇ ಹಿಂದಿ ಚಲನಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡುವುದಿಲ್ಲ ಎಂದು ಮೇಯರ್ ಶಾ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಮೂರು ದಿನಗಳಲ್ಲಿ ಸಂಭಾಷಣೆ ಬದಲಾಯಿಸುವಂತೆ ಶಾ ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ನಿರ್ಮಾಪಕರಿಗೆ ಮನವಿ ಮಾಡಿದ್ದಾರೆ. 

‘ಸೀತೆಯನ್ನು ಭಾರತದ ಮಗಳು’ ಎಂದು ಹೇಳುವ ಸಂಭಾಷಣೆ ಬದಲಾಯಿಸಿದ ನಂತರವೇ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶಿಸಲು ಅನುಮತಿ ನೀಡಲಾಗುವುದು ಎಂದು ನೇಪಾಳದ ಚಲನಚಿತ್ರ ಪ್ರಮಾಣೀಕರಣ ಮಂಡಳಿ ತಿಳಿಸಿದೆ.

ಪೌರಾಣಿಕ ಪುಸ್ತಕಗಳ ಪ್ರಕಾರ, ಸೀತೆ ನೇಪಾಳದಲ್ಲಿರುವ ಜನಕಪುರದಲ್ಲಿ ಜನಿಸಿದಳು ಎಂದು ನಂಬಲಾಗಿದೆ.

ರಾಘವ್ ಪಾತ್ರದಲ್ಲಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೊನ್, ಶೇಷನಾಗಿ ಸನ್ನಿ ಸಿಂಗ್ ಮತ್ತು ಲಂಕೇಶ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿರುವ ಆದಿಪುರುಷ್ ಚಿತ್ರವನ್ನು ಓಂ ರಾವತ್ ನಿರ್ದೇಶಿಸಿದ್ದಾರೆ ಮತ್ತು ಟಿ-ಸೀರಿಸ್ ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT