ಕಠ್ಮಂಡು: ನೇಪಾಳದಲ್ಲಿ ಐದು ಪಕ್ಷಗಳ ಒಕ್ಕೂಟ ನಾಯಕರು ಸೋಮವಾರ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ ಹೊಸ ಸರ್ಕಾರ ರಚನೆಯ ಕುರಿತು ಚರ್ಚಿಸಿದರು.

ನೇಪಾಳಿ ಕಾಂಗ್ರೆಸ್‌ನ ಉಪಾಧ್ಯಕ್ಷ ಪುರ್ಣ ಬಹದ್ದೂರ್ ಖಡ್ಕ, ಹಿರಿಯ ನಾಯಕ ರಾಮ್‌ಚಂದ್ರ ಪೌಡೆಲ್, ಸಿಪಿಎನ್ (ಮಾವೋವಾದಿ ಕೇಂದ್ರ)ದ ಅಧ್ಯಕ್ಷ ಪುಷ್ಪ ಕಮಲ್ ದಹಲ್ ‘ಪ್ರಚಂಡ’, ಹಿರಿಯ ಉಪಾಧ್ಯಕ್ಷ ನಾರಾಯಣ ಕಜಿ ಶ್ರೇಷ್ಠ, ಸಿಪಿಎನ್ (ಯುಎಸ್) ಅಧ್ಯಕ್ಷ ಮಾಧವ್ ನೇಪಾಳ್ ಹಾಗೂ ರಾಷ್ಟ್ರೀಯ ಜನಮೋರ್ಚಾದ ಉಪಾಧ್ಯಕ್ಷ ದುರ್ಗಾ ಪೌಡಲ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಐದು ಪಕ್ಷಗಳ ಒಕ್ಕೂಟವು ಸಂಸತ್ ಚುನಾವಣೆಯಲ್ಲಿ ಒಟ್ಟು 165ರಲ್ಲಿ 90 ಸ್ಥಾನಗಳನ್ನು ಪಡೆದಿದೆ.

ಪರಸ್ಪರ ತಿಳಿವಳಿಕೆ ಮತ್ತು ಸಹಕಾರದೊಂದಿಗೆ ಮುನ್ನಡೆಯುವ ಅಗತ್ಯವನ್ನು ಚುನಾವಣಾ ಫಲಿತಾಂಶ ಸೂಚಿಸಿದ್ದು, ದೇಶದ ಮುಂದಿರುವ ಸವಾಲುಗಳನ್ನು ಎದುರಿಸಲು ಪ್ರಸ್ತುತ ಒಕ್ಕೂಟವನ್ನು ಮುಂದುವರಿಸುವುದು ಅಗತ್ಯ ಎಂದು ಸಭೆಯ ಬಳಿಕ ಸಮ್ಮಿಶ್ರ ಪಕ್ಷಗಳ ನಾಯಕರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.