ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ: ಅಂತಿಮ ಸಂಸ್ಕಾರಕ್ಕೆ ನೆರೆದಿದ್ದವರ ಮೇಲೆ ಟ್ರಕ್‌ ಹರಿದು ಐವರು ದುರ್ಮರಣ

Published 9 ಸೆಪ್ಟೆಂಬರ್ 2023, 14:13 IST
Last Updated 9 ಸೆಪ್ಟೆಂಬರ್ 2023, 14:13 IST
ಅಕ್ಷರ ಗಾತ್ರ

ಇಸ್ತಾಂಬುಲ್‌: ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರ ಮೇಲೆ ಟ್ರಕ್‌ ಹರಿದು ಐವರು ಮೃತಪಟ್ಟು, 25 ಜನರು ಗಾಯಗೊಂಡಿರುವ ಘಟನೆ ಟರ್ಕಿಯ ಕಹ್ರಮನ್‌ಮಾರಾಸ್‌ ಪ್ರಾಂತ್ಯದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟ್ರಕ್‌ನ ಬ್ರೇಕ್‌ ವಿಫಲವಾಗಿ ರಸ್ತೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದ ಕಾರಣ ಈ ದುರಂತ ಸಂಭವಿಸಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪ್ರಾಂತ್ಯದ ಗವರ್ನರ್‌ ಅವರು ಅಲ್ಲಿಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾರೊಂದರ ಪಕ್ಕದಲ್ಲಿ ಟ್ರಕ್‌ ತಲೆಕೆಳಗಾಗಿ ಬಿದ್ದಿರುವುದು ಮತ್ತು ಕಾರು ನಜ್ಜುಗುಜ್ಜಾಗಿರುವ ಚಿತ್ರವನ್ನು ಟರ್ಕಿಯ ಸುದ್ದಿಸಂಸ್ಥೆ ಪ್ರಕಟಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT