ಅಲಾಸ್ಕ: ಉಕ್ರೇನ್–ರಷ್ಯಾ ಯುದ್ಧವನ್ನು ಅಂತ್ಯಗೊಳಿಸುವ ಸಲುವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸುದೀರ್ಘ ಮಾತುಕತೆ ನಡೆಸಿಯೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ‘ಒಮ್ಮತಕ್ಕೆ ಬಾರದ ಹೊರತು ಯಾವುದೇ ಒಪ್ಪಂದ ಮಾಡಿಕೊಳ್ಳುವುದು ಸಾಧ್ಯವಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.

‘ಉಕ್ರೇನ್ ವಿಚಾರದಲ್ಲಿ ನಮ್ಮ ಮಧ್ಯೆ ಕೆಲವು ವಿಚಾರಗಳಲ್ಲಿ ಸಹಮತ ಮೂಡಿದೆ. ಆದರೆ, ಇದನ್ನು ಐರೋಪ್ಯ ದೇಶಗಳು ಹಾಳು ಮಾಡಬಾರದು’ ಎಂದು ಪುಟಿನ್ ಪ್ರತಿಕ್ರಿಯಿಸಿದ್ದಾರೆ. ‘ಸೋಮವಾರ ತಮ್ಮನ್ನು ಭೇಟಿಯಾಗುವಂತೆ ಟ್ರಂಪ್ ಆಹ್ವಾನ ನೀಡಿದ್ದಾರೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಪುಟಿನ್ ಅವರೊಂದಿಗೆ ನಡೆಸಿದ ಮಾತುಕತೆಯ ವಿವರಗಳನ್ನು ನೀಡಲು ಝೆಲೆನ್ಸ್ಕಿ ಮತ್ತು ಐರೋಪ್ಯ ದೇಶಗಳ ನಾಯಕರನ್ನು ಆಹ್ವಾನಿಸುವುದಾಗಿ ಟ್ರಂಪ್ ಅವರು ಹೇಳಿದ್ದಾರೆ. ಮಾತುಕತೆ ಬಳಿಕ ಟ್ರಂಪ್ ಅವರೊಂದಿಗೆ ಝೆಲೆನ್ಸ್ಕಿ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆ ಬಳಿಕ ಟ್ರಂಪ್ ಅವರು ಐರೋಪ್ಯ ನಾಯಕರ ಬಳಿಯೂ ಮಾತುಕತೆ ನಡೆಸಿದ್ದಾರೆ. ಈ ಗುಂಪು ಕರೆಯ ವೇಳೆ ಝೆಲೆನ್ಸ್ಕಿ ಅವರೂ ಇದ್ದರು.

ಮಾತುಕತೆಯ ಬಳಿಕ ಟ್ರಂಪ್ ಮತ್ತು ಪುಟಿನ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರೂ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಅಲಾಸ್ಕದಿಂದ ಹೊರಡುವ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ‘ಕೆಲಸ ಮಾಡಿ ಮುಗಿಸುವುದು ಈಗ ಝೆಲೆನ್ಸ್ಕಿ ಅವರ ಜವಾಬ್ದಾರಿ. ಆದರೆ, ಐರೋಪ್ಯ ದೇಶಗಳು ಈ ಮಾತುಕತೆಯಲ್ಲಿ ಭಾಗವಹಿಸುವುದು ಬಹುತೇಕ ಖಚಿತ’ ಎಂದರು.

ನಮ್ಮ ನಡುವಿನ ಮಾತುಕತೆಯು ಉಕ್ರೇನ್ ಸಮಸ್ಯೆಯನ್ನು ಬಗೆಹರಿಸುತ್ತದೆ ಮಾತ್ರವಲ್ಲ. ರಷ್ಯಾ ಮತ್ತು ಅಮೆರಿಕ ಮಧ್ಯದ ವ್ಯಾಪಾರ ಹಾಗೂ ಸಂಬಂಧವೂ ಪುನಃ ಆರಂಭಗೊಳ್ಳಲಿದೆ
ವ್ಲಾದಿಮಿರ್ ಪುಟಿನ್ ರಷ್ಯಾ ಅಧ್ಯಕ್ಷ

‘ನಾನೇ ಯುದ್ಧ ನಿಲ್ಲಿಸಿದೆ’:

‘ಯುದ್ಧ ಬಹಳ ಕೆಟ್ಟದು. ವ್ಯಾಪಾರದ ವಿಷಯದ ಮೂಲಕ ನಾನು ಭಾರತ ಮತ್ತು ಪಾಕಿಸ್ತಾನದ ಯುದ್ಧವನ್ನು ನಿಲ್ಲಿಸಿದೆ. ನಾನು ಎಲ್ಲ ದೇಶಗಳೊಂದಿಗೂ ವ್ಯಾಪಾರದ ಮೂಲಕವೇ ಮಾತುಕತೆ ನಡೆಸುವುದು. ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ನಾನು ಅವರ ಬಳಿ ದೂರವಾಣಿ ಮೂಲಕ ಮಾತನಾಡುತ್ತೇನೆ ಎಂದರೆ ನಾನು ಆ ದೇಶಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ಕಾರಣಕ್ಕಾಗಿ ‘ಶಾಂತಿ ಸ್ಥಾಪಿಸಿ. ಇಲ್ಲವಾದಲ್ಲಿ ನಾನು ವ್ಯಾಪಾರ ಮಾಡುವುದಿಲ್ಲ’ ಎಂದು ಹೇಳುತ್ತೇನೆ’ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.