ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಸಾಮರ್ಥ್ಯ ಕುಗ್ಗಿಸುವ ’ಪ್ಯಾರಿಸ್ ಒಪ್ಪಂದ’ ಏಕಪಕ್ಷೀಯ: ಟ್ರಂಪ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಟೀಕೆ
Last Updated 30 ಜುಲೈ 2020, 8:19 IST
ಅಕ್ಷರ ಗಾತ್ರ

ವಾಷಿಂಗ್‌ಟನ್ : ‘ಪ್ಯಾರಿಸ್ ಒಪ್ಪಂದದಲ್ಲಿರುವ ನಿಯಮಗಳನ್ನು ಅಮೆರಿಕ ಮಾತ್ರ ಪಾಲನೆ ಮಾಡುವ ಮೂಲಕ ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ಸಹಕರಿಸಬೇಕು. ಆದರೆ, ಭಾರತ, ಚೀನಾ ಮತ್ತು ರಷ್ಯಾಗಳಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ. ಇದು ‘ಏಕಪಕ್ಷೀಯ, ಸಾರ್ಮಥ್ಯ ಕುಗ್ಗಿಸುವಂತಹ’ ಒಪ್ಪಂದವಾಗಿದೆ’ ಎಂದು ‌ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಟೀಕಿಸಿದ್ದಾರೆ.

ಟೆಕ್ಸಾಸ್‌ನ ಮಿಡ್‌ಲ್ಯಾಂಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ‘ಹಿಂದೆಅಮೆರಿಕದಲ್ಲಿ ಆಳ್ವಿಕೆ ನಡೆಸಿದ್ದ ‘ಡೆಮಾಕ್ರಟಿಕ್‌’ ಪಕ್ಷದ ಸರ್ಕಾರ ಪ್ಯಾರಿಸ್‌ ಒಪ್ಪಂದದಂತಹ ನಿಯಮಗಳನ್ನು ಅಳವಡಿಸಿಕೊಂಡ ಕಾರಣದಿಂದಾಗಿ ನಾವು ಬೇರೆ ದೇಶದೊಂದಿಗೆ ಸ್ಪರ್ಧೆಗೆ ಇಳಿಯಲು ತೊಡಕಾಗಿದೆ’ ಎಂದು ದೂರಿದ್ದಾರೆ.

ಪ್ರತಿ ಮಾತಿನಲ್ಲೂ ಪ್ಯಾರಿಸ್‌ ಒಪ್ಪಂದಿಂದ ಅಮೆರಿಕ ಹೊರಗುಳಿದಿರುವ ಕುರಿತ ಕಾರಣಗಳನ್ನು ನೀಡಿದ ಅವರು, ‘ಈ ಒಪ್ಪಂದದಲ್ಲಿರುವಂತಹ ಹಲವು ನಿಬಂಧನೆಗಳನ್ನು ನಾವು ಅಳವಡಿಸಿಕೊಂಡರೆ, ಅಮೆರಿಕದ ಉದ್ಯೋಗ, ಕಾರ್ಖಾನೆಗಳು, ಉದ್ಯಮಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಬೇರೆ ಬೇರೆ ರಾಷ್ಟ್ರಗಳು ಸ್ಪರ್ಧೆಯಲ್ಲಿ ಮುಂದುವರಿಯುತ್ತವೆ. ಹಾಗೆ ಆಗಲು ನಾನು ಬಿಡುವುದಿಲ್ಲ. ಹಿಂದಿನ ಸರ್ಕಾರ ಕೈಗೊಂಡ ಕ್ರಮದಿಂದ ಬೇರೆ ಬೇರೆ ರಾಷ್ಟ್ರಗಳು ಸ್ಪರ್ಧೆಯಲ್ಲಿ ಮೊದಲ ಸ್ಥಾನದಲ್ಲಿದ್ದವು. ಆದರೆ, ನಾನು ಅಧ್ಯಕ್ಷನಾಗಿರುವವರೆಗೂ ಅಮೆರಿಕ ಎಂದೂ ಮೊದಲ ಸ್ಥಾನದಲ್ಲಿರಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT