ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಇರಾನ್‌ ಮೇಲೆ ಅಮೆರಿಕ ಬಾಂಬ್ ದಾಳಿ:‘Operation Midnight Hammer’ ಪೂರ್ಣ ಮಾಹಿತಿ

ಮೂರು ಪರಮಾಣು ಘಟಕಗಳು ನಾಶ : ಟ್ರಂಪ್‌ ಹೇಳಿಕೆ
Published : 22 ಜೂನ್ 2025, 23:37 IST
Last Updated : 22 ಜೂನ್ 2025, 23:37 IST
ಫಾಲೋ ಮಾಡಿ
Comments
ಭೂಮಿ ಮೇಲಿನ ಯಾವ ದೇಶವೂ ಮಾಡಲಾಗದಂತಹ ಕಾರ್ಯವನ್ನು ಅಮೆರಿಕ ಮಾಡಿದೆ. ಡೊನಾಲ್ಡ್‌ ಟ್ರಂಪ್‌ ಅವರು ಕೈಗೊಂಡ ನಿರ್ಧಾರ ಇತಿಹಾಸವನ್ನೇ ಬದಲಿಸಲಿದೆ
ಬೆಂಜಮಿನ್‌ ನೆತನ್ಯಾಹು ಇಸ್ರೇಲ್‌ ಪ್ರಧಾನಿ
ಈ ದಾಳಿ ಮೂಲಕ ಅಮೆರಿಕ ರಾಜತಾಂತ್ರಿಕತೆಗೇ ದ್ರೋಹ ಬಗೆದಿದೆ. ರಾಜತಾಂತ್ರಿಕ ಮಾರ್ಗ ಈಗ ನಮ್ಮ ಆಯ್ಕೆಯಾಗಿ ಉಳಿದಿಲ್ಲ ಅ
ಬ್ಬಾಸ್‌ ಅರಾಗ್ಚಿ ಇರಾನ್‌ ವಿದೇಶಾಂಗ ಸಚಿವ
ಅಂತರರಾಷ್ಟ್ರೀಯ ಭದ್ರತೆಗೆ ಇರಾನ್‌ನ ಪರಮಾಣು ಕಾರ್ಯಕ್ರಮ ದೊಡ್ಡ ಬೆದರಿಕೆಯಾಗಿದೆ. ಈ ದಾಳಿ ಮೂಲಕ ಅಮೆರಿಕ ಬೆದರಿಕೆಯನ್ನು ಹೋಗಲಾಡಿಸಿದೆ. ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಲು ಇರಾನ್‌ಗೆ ಎಂದಿಗೂ ಅವಕಾಶ ನೀಡಬಾರದು
–ಕೀಯರ್‌ ಸ್ಟಾರ್ಮರ್ ಬ್ರಿಟನ್‌ ಪ್ರಧಾನಿ
ಪಶ್ಚಿಮ ಏಷ್ಯಾದಲ್ಲಿನ ಈ ಉದ್ವಿಗ್ನತೆಯನ್ನು ತ್ವರಿತವಾಗಿ ಶಮನ ಮಾಡುವುದು ಮುಖ್ಯ. ಇದು ತೀವ್ರ ಕಳವಳಕಾರಿ ಬೆಳವಣಿಗೆಯಾಗಿದ್ದು ನಾವು ಪರಿಸ್ಥಿತಿ ಮೇಲೆ ನಿಗಾ ಇರಿಸಿದ್ದೇವೆ
– ಶಿಗೆರು ಇಶಿಬಾ ಜಪಾನ್‌ ಪ್ರಧಾನಿ
ಉದ್ವಿಗ್ನತೆ ತಗ್ಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ದೇಶಗಳು ಮಾತುಕತೆಗೆ ಮುಂದಾಗಬೇಕು. ಅಮೆರಿಕ ದಾಳಿಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿ ಕುರಿತು ಐರೋಪ್ಯ ಒಕ್ಕೂಟವು ಸೋಮವಾರ ಚರ್ಚಿಸಲಿದೆ –
ಕಜಾ ಕಲ್ಲಾಸ್‌ ಐರೋಪ್ಯ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥ
ಅಣ್ವಸ್ತ್ರ ತಯಾರಿಕೆಯು ಇಡೀ ಪ್ರದೇಶಕ್ಕೆ ಬೆದರಿಕೆ ಒಡ್ಡಿತ್ತು. ಅಮೆರಿಕ ನಡೆಸಿದ ದಾಳಿ ಪರಿಣಾಮ ಸಂಘರ್ಷ ತಗ್ಗುವುದು ಹಾಗೂ ಶಾಂತಿ ಒಪ್ಪಂದ ಕುರಿತು ಇರಾನ್‌ ಮಾತುಕತೆಗೆ ಮುಂದಾಗಲಿದೆ ಎಂಬ ಆಶಯ ಹೊಂದಿದ್ದೇವೆ
– ಆ್ಯಂಟೊನಿಯೊ ತಜಾನಿ ಇಟಲಿ ವಿದೇಶಾಂಗ ಸಚಿವ
ಮಧ್ಯಪ್ರಾಚ್ಯದಲ್ಲಿ ಬೆಳವಣಿಗೆಗಳು ಆತಂಕ ಮೂಡಿಸಿವೆ. ರಾಜತಾಂತ್ರಿಕ ಮಾರ್ಗದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದನ್ನು ನ್ಯೂಜಿಲೆಂಡ್‌ ಬೆಂಬಲಿಸುತ್ತದೆ. ಮಿಲಿಟರಿ ಕಾರ್ಯಾಚರಣೆಗಿಂತ ರಾಜತಾಂತ್ರಿಕೆಯೇ ಸುಸ್ಥಿರ ಪರಿಹಾರ ನೀಡಬಲ್ಲದು
– ವಿನ್ಸ್‌ಟನ್ ಪೀಟರ್ಸ್‌ ನ್ಯೂಜಿಲೆಂಡ್‌ ವಿದೇಶಾಂಗ ಸಚಿವ
ಇರಾನ್‌ನ ಅಣ್ವಸ್ತ್ರ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮ ಜಾಗತಿಕ ಶಾಂತಿ ಮತ್ತು ಸುರಕ್ಷತೆಗೆ ಅಪಾಯ ಎಂಬುದು ನಮ್ಮ ಸ್ಪಷ್ಟ ನಿಲುವಾಗಿತ್ತು. ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಸಂಘರ್ಷ ಶಮನ ಮಾಡುವಂತೆ ಒತ್ತಾಯಿಸುತ್ತೇವೆ
– ಆಸ್ಟ್ರೇಲಿಯಾ ಸರ್ಕಾರದ ವಕ್ತಾರ
ಇರಾಕ್‌ ವಿಚಾರದಲ್ಲಿ ಮಾಡಿದ್ದ ತಪ್ಪನ್ನು ಇರಾನ್‌ ವಿಷಯದಲ್ಲಿ ಅಮೆರಿಕ ಪುನರಾವರ್ತನೆ ಮಾಡುವುದೇ? ಅಮೆರಿಕದ ನಡೆಸಿರುವ ಈ ದಾಳಿ ಅಪಾಯಕಾರಿಯಾಗಲಿದೆ. ಇಂತಹ ದಾಳಿಗಳು ಮಧ್ಯ ಪ್ರಾಚ್ಯದಲ್ಲಿ ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಿದ್ದನ್ನು ಇತಿಹಾಸ ಹೇಳುತ್ತದೆ. ಮಾತುಕತೆ ಮೂಲಕ ಶಾಂತಿ ಸ್ಥಿರತೆ ಕಾಪಾಡುವುದು ಆದ್ಯತೆಯಾಗಲಿ
–ಚೀನಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT