ಹಟೇ, ಟರ್ಕಿ: ಭಾರಿ ಭೂಕಂಪನ ಸಂಭವಿಸಿದ 13 ದಿನದ ನಂತರವು ಬದುಕುಳಿದವರಿಗೆ ಶೋಧ ಟರ್ಕಿಯಲ್ಲಿ ಶೋಧ ನಡೆದಿದ್ದು, ಶನಿವಾರ ಮಗು ಸೇರಿ ಮೂವರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಸ್ಥಳೀಯ ಎನ್‌ಟಿವಿ ಇದನ್ನು ವರದಿ ಮಾಡಿದ್ದು, ವಿವರ ನೀಡಿಲ್ಲ. ರಕ್ಷಿಸಿದವರನ್ನು ಆಸ್ಪತ್ರೆಗೆ ಒಯ್ಯುತ್ತಿರುವ ದೃಶ್ಯಗಳ ವರದಿ ಮಾಡಿದೆ. ಮೂವರಲ್ಲಿ ಒಬ್ಬರು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿಸಿದೆ.

ಫೆಬ್ರುವರಿ 6ರಂದು ಟರ್ಕಿ, ಸಿರಿಯಾದಲ್ಲಿ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.8 ದಾಖಲಾಗಿತ್ತು. 43 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಸಾವಿರಾರು ಜನ ಅತಂತ್ರರಾಗಿದ್ದರು.

ಬದುಕುಳಿದವರಿಗಾಗಿ 13 ದಿನದ ನಂತರವೂ ಶೋಧ ಕಾರ್ಯಾಚರಣೆ ನಡೆಸಿದ್ದು, ಪವಾಡಸದೃಶ ಎಂಬಂತೆ ಅವಶೇಷಗಳಡಿ ಜೀವ ಉಳಿಸಿಕೊಂಡಿದ್ದ ಹಲವರನ್ನು ರಕ್ಷಿಸಲಾಗಿದೆ. ಶುಕ್ರವಾರ 45 ವರ್ಷದ ವ್ಯಕ್ತಿ, 14 ವರ್ಷದ ಬಾಲಕ ಸೇರಿ ಮೂವರನ್ನು ಶೋಧ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ರಕ್ಷಿಸಿದ್ದರು.

ಘಾನಾದ ಫುಟ್‌ಬಾಲ್ ಆಟಗಾರನ ಶವಪತ್ತೆ

ಇಸ್ತಾನ್‌ಬುಲ್ ವರದಿ: ಭೂಕಂಪನದಲ್ಲಿ ಮೃತಪಟ್ಟಿದ್ದ ಘಾನಾದ ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರ, 31 ವರ್ಷದ ಕ್ರಿಸ್ಟಿಯಾನ್ ಅಟ್ಸು ಅವರ ಶವ ಶನಿವಾರ ಪತ್ತೆಯಾಗಿದೆ.

ಟರ್ಕಿ ಸೂಪರ್ ಲೀಗ್ ಕ್ಲಬ್ ಹ್ಯಾಟೈಸ್ಪೋರ್ ಪರ ಆಡುತ್ತಿದ್ದ ಇವರು ಅಂಟಾಕ್ಯ ನಗರದಲ್ಲಿ 12 ಮಹಡಿಯ ವಿಲಾಸಿ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಭೂಕಂಪನದಲ್ಲಿ ಆ ಕಟ್ಟಡವು ನೆಲಸಮಗೊಂಡಿತ್ತು.

ಕಟ್ಟಡದ ಅವಶೇಷಗಳಡಿಯಿಂದ ಅವರ ಶವವನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಶವವನ್ನು ಘಾನಾಗೆ ಕಳುಹಿಸಿಕೊಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.