ಲ್ಹೋಕ್ಸೆಯುಮಾವೆ (ಇಂಡೋನೇಷ್ಯಾ)): ಮಕ್ಕಳು, ಮಹಿಳೆಯರು ಸೇರಿದಂತೆ 260ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ಎರಡು ದೋಣಿಗಳಲ್ಲಿ ಇಂಡೋನೇಷ್ಯಾಕ್ಕೆ ಬಂದಿದ್ದಾರೆ.

ಭಾನುವಾರ ಸಂಜೆ ಇಲ್ಲಿಗೆ ಬಂದಿಳಿದಿರುವ ನಿರಾಶ್ರಿತರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಜೊತೆಗೆ ಅವರನ್ನು ಸುರಕ್ಷಿತವಾಗಿಡಲು ಪೊಲೀಸರು ಮತ್ತು ಸೇನಾಧಿಕಾರಿಗಳು, ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಹಾಗೂ ಸ್ಥಳೀಯ ಸರ್ಕಾರವನ್ನು ಸಂಪರ್ಕಿಸಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ನೋವಾ ಸೂರ್ಯಂದರು ಸೋಮವಾರ ತಿಳಿಸಿದ್ದಾರೆ.

ಕಳೆದ ಫೆಬ್ರುವರಿಯಿಂದ 300ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ಇಲ್ಲಿಗೆ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಅನುಮತಿ ನಿರಾಕರಿಸಿದ ಮಲೇಷ್ಯಾ:

ಅಕ್ರಮವಾಗಿ ದೇಶ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಸುಮಾರು 300 ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತಿದ್ದ ಎರಡು ದೋಣಿಗಳಿಗೆ ಶನಿವಾರ ಅನುಮತಿ ನಿರಾಕರಿಸಲಾಗಿದೆ ಎಂದು ಮಲೇಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ಈಶಾನ್ಯ ರೆಸಾರ್ಟ್ ದ್ವೀಪವಾದ ಲಂಗಕಾವಿಗೆ ಶುಕ್ರವಾರ 196 ರೋಹಿಂಗ್ಯಾ ನಿರಾಶ್ರಿತರು ಬಂದಿಳಿದ ನಂತರ ಇನ್ನೂ ಎರಡು ದೋಣಿಗಳು ದೇಶ ಪ್ರವೇಶಿಸಲು ಪ್ರಯತ್ನಿಸುತ್ತಿವೆ ಎಂದು ಮ್ಯಾರಿಟೈಮ್ ಎನ್ಫೋರ್ಸ್ಮೆಂಟ್ ಏಜೆನ್ಸಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.