ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ ಇಬ್ಬರು ಮೀನುಗಾರರು ನಾಪತ್ತೆ: ಶ್ರೀಲಂಕಾ ನೌಕಾಪಡೆ

Published 27 ಆಗಸ್ಟ್ 2024, 13:40 IST
Last Updated 27 ಆಗಸ್ಟ್ 2024, 13:40 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದ ಕಛತೀವು ದ್ವೀಪದ ಬಳಿ ನಾಲ್ವರು ಭಾರತೀಯ ಮೀನುಗಾರರಿದ್ದ ದೋಣಿ ಮಗುಚಿದ್ದು, ಇಬ್ಬರು ಈಜಿ ಸುರಕ್ಷಿತವಾಗಿ ದಡ ತಲುಪಿದ್ದರೆ, ಮತ್ತಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.

ಮಂಗಳವಾರ ಮುಂಜಾನೆ ಈ ಘಟನೆ ಜರುಗಿದ್ದು, ಇಬ್ಬರು ಮೀನುಗಾರರು ಸುರಕ್ಷಿತವಾಗಿ ಕಛತೀವು ದ್ವೀಪಕ್ಕೆ ಬಂದಿದ್ದಾರೆ. ಶ್ರೀಲಂಕಾ ನೌಕಾಪಡೆಯು ಸ್ಥಳಕ್ಕೆ ತೆರಳಿ, ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಶ: ಮತ್ತೊಂದು ಘಟನೆಯಲ್ಲಿ ಶ್ರೀಲಂಕಾದ ಜಲ ಗಡಿಗೆ ಪ್ರವೇಶಿಸಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ 8 ಮಂದಿ ಭಾರತೀಯ ಮೀನುಗಾರರು ಹಾಗೂ ಒಂದು ದೋಣಿಯನ್ನು ಶ್ರೀಲಂಕಾ ನೌಕಾಪಡೆಯು ಸೋಮವಾರ ತಡರಾತ್ರಿ ವಶಕ್ಕೆ ಪಡೆದಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT