ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಪ್ರವಾಹ: ಯುಎಇಯಿಂದ 175 ಟನ್‌ ತೂಕದ ಪರಿಹಾರ ಸಾಮಗ್ರಿ

Last Updated 25 ಆಗಸ್ಟ್ 2018, 5:25 IST
ಅಕ್ಷರ ಗಾತ್ರ

ದುಬೈ: ಶತಮಾನದ ದುರಂತ ಕಂಡಕೇರಳಕ್ಕೆ175 ಟನ್‌ಗಳಷ್ಟು ಪರಿಹಾರ ಸಾಮಗ್ರಿಯನ್ನು ಸಾಗಿಸುವುದಾಗಿ ಯುಎಇ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೇಳಿದೆ.

ಯುಎಇಯ ಹಲವು ಸಂಘ ಸಂಸ್ಥೆಗಳು ಹಾಗೂ ಉದ್ಯಮಗಳುನೀಡಿರುವ ಪರಿಹಾರ ಸಾಮಗ್ರಿಗಳನ್ನುಪ್ರವಾಹ ಪೀಡಿತ ಪ್ರದೇಶಗಳಿಗೆ ಸಮೀಪದಲ್ಲಿ ತಿರುವನಂತಪುರಂಗೆ ಏರ್‌ಕಾರ್ಗೋ ಸಂಸ್ಥೆಯ 12 ವಿಮಾನಗಳ ಮೂಲಕ ಕಳುಹಿಸಲಾಗುತ್ತದೆ.

ಜೀವ ರಕ್ಷಕ ದೋಣಿಗಳು, ಹೊದಿಕೆಗಳು ಮತ್ತು ಆಹಾರ ಪದಾರ್ಥಗಳು ಇದರಲ್ಲಿದ್ದು, ಸ್ಥಳೀಯ ಪ್ರವಾಹ ಪರಿಹಾರ ಆಡಳಿತಕ್ಕೆ ಒಪ್ಪಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ನಿರಂತರವಾಗಿ ಸುರಿದ ಮಳೆಯಿಂದಾಗಿ ಉಂಟಾದ ಪ್ರವಾಹವು ಕೇರಳದಲ್ಲಿ ಅಪಾರ ಹಾನಿ ಸೃಷ್ಟಿಸಿತ್ತು.

ಪ್ರವಾಹ ಕಾರಣದಿಂದಾಗಿ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನುಮುಚ್ಚಲಾಗಿದ್ದು, ಆಗಸ್ಟ್‌ 29ಕ್ಕೆ ಮತ್ತೆ ಪ್ರಯಾಣ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT